ಪಂಜ :ಜೇಸಿ ಸಪ್ತಾಹ-2025 ಕೆಸರುಗದ್ದೆ ಕ್ರೀಡಾ ಕೂಟ: ಫಲಿತಾಂಶ

ಜೇಸಿಐ ಪಂಜ ಪಂಚಶ್ರೀ ಇದರ ಜೇಸಿ ಸಪ್ತಾಹ-2025 ಅ.26 ರಿಂದ ನ.1 ತನಕ ನಡೆಯಲಿದೆ. ಅ.26 ರಂದು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಕೆಸರು ಗದ್ದೆ ಕ್ರೀಡಾ ಕೂಟ ನಡೆಯಿತು. ವಿಜೇತ ತಂಡಗಳಿಗೆ ನಗದು ಮತ್ತು ಜೇಸಿ ಟ್ರೋಫಿ ವಿತರಿಸಲಾಯಿತು. ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು.
ಹಗ್ಗಜಗ್ಗಾಟ ಪುರುಷರ ವಿಭಾಗ: ಪ್ರಥಮ ಶ್ರೀ ದೇವಿ ಪಾಣೆಮಂಗಳೂರು ಎ, ದ್ವಿತೀಯ ವಿದ್ಯಾದಾಯಿನಿ ವಿದ್ಯಾನಗರ, ತೃತೀಯ ಶ್ರೀ ದೇವಿ ಪಾಣೆಮಂಗಳೂರು ಸಿ,ಚತುರ್ಥ ಶಾಸ್ತಾರ ನೆಲ್ಯಾಡಿ.









ಮಹಿಳಾ ವಿಭಾಗ: ಪ್ರಥಮ ನಾಗಶ್ರೀ ಫ್ರೆಂಡ್ಸ್ ಸುಳ್ಯ ತಂಡ , ದ್ವಿತೀಯ ಸ್ವಾಮಿ ಕೊರಗಜ್ಜ ಮರ್ಧಾಳ, ತೃತೀಯ ತ್ರಿಶೂಲಿನಿ ಬಳ್ಪ, ಚತುರ್ಥ ನಂದಿಕೇಶ್ವರ ಫ್ರೆಂಡ್ಸ್ ಬೆದ್ರಾಳ ಪುತ್ತೂರು.
ವಾಲಿಬಾಲ್: ಪ್ರಥಮ ಸಾಯಿ ಮಧುರ ಗುತ್ತಿಗಾರು ,ದ್ವಿತೀಯ ಕೆ ಎಸ್ ಜಿ ಪಿ ಯು ಕಾಲೇಜು ನಿಂತಿಕಲ್ಲು ,ಸೆಮಿಫೈನಲ್ ನಿರ್ಗಮಿತ ತಂಡ ಯಂಗ್ ಸ್ಟಾರ್ ಫ್ರೆಂಡ್ಸ್
ಮತ್ತು ಶಿವ ಫ್ರೆಂಡ್ ಪಂಜ.












