ಪಂಜ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪ್ರಬಂಧ ಹಾಗೂ ಕಥಾ ಸ್ಪರ್ಧೆಗಳಿಗೆ ಆಹ್ವಾನ

0

ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವು ನವೆಂಬರ್ 16ರಂದು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ಇದರ ವಠಾರದಲ್ಲಿ ನಡೆಯಲಿದೆ.
ಈ ಸಮ್ಮೇಳನದ ಸಲುವಾಗಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು, ಹಾಗೂ ಸಾರ್ವಜನಿಕ ಹೀಗೆ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ” ನಾನು ಓದಿದ ಪುಸ್ತಕ” ಎಂಬ ವಿಷಯದಲ್ಲಿ ಪ್ರಬಂಧ ಹಾಗೂ ಸ್ವರಚಿತ ಕಥೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಎ4 ಅಳತೆಯ ಕಾಗದದಲ್ಲಿ ಎರಡು ಪುಟಗಳಿಗೆ ಮೀರದಂತೆ ಬರೆದು ನವೆಂಬರ್ 2 ರ ಒಳಗೆ ತಲುಪುವಂತೆ ಕಳುಹಿಸಬೇಕು. ಒಬ್ಬರು ಎರಡು ವಿಭಾಗದಲ್ಲಿ ಭಾಗವಹಿಸಬಹುದು. ಪ್ರತಿ ವಿಭಾಗದಲ್ಲಿ ಮೂರು ಬಹುಮಾನಗಳು ಹಾಗೂ ಉತ್ತಮ ಬರಹಗಾರರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು. ಬರಹಗಳು ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು.
ಬರಹಗಳನ್ನು ಯೋಗಿಶ್ ಹೊಸೊಳಿಕೆ, ವಳಲಂಬೆ, ಗುತ್ತಿಗಾರು ಗ್ರಾಮ ಮತ್ತು ಅಂಚೆ ಸುಳ್ಯ ತಾಲೂಕು.ದ.ಕ.574218, ದೂರವಾಣಿ:9449576632 ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸುವಂತೆ ಸಾಹಿತ್ಯ ಸಮ್ಮೇಳನದ ಸಂಘಟನಾ ಸಮಿತಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಮತ್ತು ಪಂಜ ಹೋಬಳಿ ಘಟಕದ ಅಧ್ಯಕ್ಷರಾದ ಬಾಬು ಗೌಡ ಅಚ್ರಪ್ಪಾಡಿ ತಿಳಿಸಿರುತ್ತಾರೆ.