ವಿಧಾನಪರಿಷತ್ ಸದಸ್ಯ ಭೋಜೇ ಗೌಡರ ರೂ.3 ಲಕ್ಷದ ಅನುದಾನದಲ್ಲಿ ನಿರ್ಮಾಣ ವಾಗಲಿರುವ ಶಾಲಾ ಆವರಣ ಗೋಡೆಯ ಗುದ್ದಲಿ ಪೂಜೆ ಕಾರ್ಯಕ್ರಮ ಇಂದು (ಅ.27) ನಡೆಯಿತು. ಗುದ್ದಲಿ ಪೂಜೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ವೀಣಾ ಎಂ.ವಿ. ನೆರವೇರಿಸಿದರು.
















ಈ ಸಂದರ್ಭದಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಶತಮಾನೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೇಶ್ ರಾಜ್ ಹಿರಿಯಡ್ಕ, ಶಾಲಾ ಮುಖ್ಯೋಪಾಧ್ಯಾಯರು ವಾಣಿ ಕೆ ಎಸ್, ಮತ್ತು ಹಿರಿಯ ವಿದ್ಯಾರ್ಥಿಗಳಾದ ಕುಶಾಲಪ್ಪ ಮಾಸ್ತರ್ ಕಂದ್ರಪ್ಪಾಡಿ, ಕಿಶೋರ್ ಕುಮಾರ್ ಅಂಬೆಕಲ್ಲು, ಲಿಂಗಪ್ಪ ಗೌಡ ಚಿತ್ತಡ್ಕ, ಪ್ರಕಾಶ್ ಮುಂಡೋಡಿ, ಚಂದ್ರಶೇಖರ ಕಂದ್ರಪ್ಪಾಡಿ, ಹರೀಶ್ ಆಚರಿಕಾನ, ವಿಜೇಶ್ ಹಿರಿಯಡ್ಕ, ಪ್ರೀತಮ್ ಮುಂಡೋಡಿ, ವಾಣಿ ಎಂ ವಿ, ಮತ್ತು ಗುತ್ತಿಗೆದಾರರದ ಉದಯಕುಮಾರ್ ಮುಂಡೋಡಿ ಹಾಗೂ ಎಸ್ ಡಿ ಎಂ ಸಿ ಸದಸ್ಯರು, ಶಾಲಾ ಮಕ್ಕಳು, ಅಧ್ಯಾಪಕರು ಪೋಷಕರು ಉಪಸ್ಥಿತರಿದ್ದರು.
ಶಾಲಾ ಶತಮಾನೋತ್ಸವದ ಅಂಗವಾಗಿ ಸಲ್ಲಿಸಿದ ಮನವಿಗೆ ಅನುದಾನ ಮಂಜೂರುಗೊಂಡಿರುತ್ತದೆ.










