ಜೇಸಿಐ ಪಂಜ ಪಂಚಶ್ರೀ: ಜೇಸಿ ಸಪ್ತಾಹ- 2025

0

ಸುಬ್ರಹ್ಮಣ್ಯ ಕೆ.ಎಸ್.ಎಸ್.ಕಾಲೇಜು ನಲ್ಲಿ ತರಬೇತಿ ಕಾರ್ಯಾಗಾರ

ಜೇಸಿಐ ಪಂಜ ಪಂಚಶ್ರೀ ಜೇಸಿ ಸಪ್ತಾಹ 2025ರ ಎರಡನೇ ದಿನದ ಕಾರ್ಯಕ್ರಮವು ಅ.27 ರಂದು ಸುಬ್ರಹ್ಮಣ್ಯ ಕೆ.ಎಸ್.ಎಸ್. ಕಾಲೇಜುನಲ್ಲಿ ಸರಕಾರಿ ಮತ್ತು ಖಾಸಗಿ ನೇಮಕಾತಿಗಳ ತರಬೇತಿ ಕಾರ್ಯಗಾರ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ತರಬೇತಿ ನಡೆಯಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ JFM ವಾಚಣ್ಣ ಕೆರೆಮೂಲೆ ವಹಿಸಿದ್ದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಉದ್ಘಾಟಿಸಿದರು.


ಮುಖ್ಯ ಅತಿಥಿಗಳಾಗಿ ವಲಯ 15 ಜೇಸಿಐ ಭಾರತ, ಪೂರ್ವ ವಲಯಾಧ್ಯಕ್ಷ
JC PPP ಚಂದ್ರಶೇಖರ್ ನಾಯರ್,
ಎಚ್ ಆರ್ ಅಂಡ್ ಪ್ಲೀಸ್ ಮೆಂಟ್ ಆಫೀಸರ್ ಶ್ರೀಮತಿ ಆರತಿ ಕೆ, ಸಂಪನ್ಮೂಲ ವ್ಯಕ್ತಿಯಾಗಿ ಜೇಸಿಐ ಪುತ್ತೂರು ಅಧ್ಯಕ್ಷ ಮತ್ತು ವಿದ್ಯಾಮಾತ ಸಂಸ್ಥೆಯ ಮಾಲಕ JFM ಭಾಗೇಶ್ ರೈ ಜೇಸಿಐ ಪಂಜ ಪಂಚಶ್ರೀ ಸ್ಥಾಪಕಾಧ್ಯಕ್ಷ JFM ದೇವಿಪ್ರಸಾದ್ ಜಾಕೆ,ಕಾರ್ಯದರ್ಶಿ JFM ಅಶ್ವತ್ ಬಾಬ್ಲುಬೆಟ್ಟು ಸಪ್ತಾಹ ನಿರ್ದೇಶಕ JFM ದೇವಿ ಪ್ರಸಾದ್ ಚಿಕ್ಮುಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಜೇಸಿಐ ಪಂಜ ಪಂಚಶ್ರೀ ವತಿಯಿಂದ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ JFM ಗಗನ್ ತೆಂಕಪ್ಪಾಡಿ ವೇದಿಕೆಗೆ ಆಹ್ವಾನಿಸಿದರು. JC ಕಾರ್ತಿಕ್ ಐ.ವಿ. ಜೇಸಿ ವಾಣಿ
ವಾಚಿಸಿದರು. ಕಾರ್ಯಕ್ರಮದಲ್ಲಿ ಜೇಸಿಐ ಪಂಜ ಪಂಚಶ್ರೀ ಪೂರ್ವಾ ಧ್ಯಕ್ಷರು ಮತ್ತು ಸದಸ್ಯರುಗಳು ಹಾಗೂ ಕಾಲೇಜಿನ ಶಿಬಿರಾರ್ಥಿ, ವಿಧ್ಯಾರ್ಥಿಗಳು ಭಾಗವಹಿಸಿದ್ದರು.

ಅ.28 ರಂದು ಬಂಟ್ವಾಳ ತಾಲೂಕು ಪೆರುವಾಯಿ ಪಲ್ಲತ್ತಡ್ಕ ಫಾರ್ಮ್ಸ್ ನಲ್ಲಿ ಕೃಷಿ ಕ್ಷೇತ್ರ ವೀಕ್ಷಣೆ ಮತ್ತು ಮಾಹಿತಿ.

ಅ.29 ರಂದು ಪಂಜ ಲಯನ್ಸ್ ಭವನದಲ್ಲಿ ‘ಜೀವನವನ್ನು ಸಂಭ್ರಮಿಸಿ’ ಕೌಟುಂಬಿಕ ತರಬೇತಿ ಕಾರ್ಯಗಾರ.
ಅ.30 ರಂದು ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ
ಆರೋಗ್ಯ ಮಾಹಿತಿ ‘ಹದಿಹರೆಯದ ಸಮಸ್ಯೆಗಳ ಬಗ್ಗೆ ಮಾಹಿತಿ ಹಾಗೂ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳು
ನ. 1.ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಬೆಳಿಗ್ಗೆ ಗಂಟೆ 9 ರಿಂದ ನಡೆಯಲಿದೆ. ಚಿತ್ರಕಲಾ ಸ್ಪರ್ಧೆ ( ಸುಳ್ಯ ಮತ್ತು ಕಡಬ ತಾಲೂಕಿಗೆ ಒಳಪಟ್ಟ ವಿದ್ಯಾರ್ಥಿಗಳಿಗೆ ಮಾತ್ರ). LKG ಯಿಂದ 1ನೇ ತರಗತಿ ಐಚ್ಛಿಕ,2ರಿಂದ 4ನೇ ತರಗತಿ ಐಚ್ಛಿಕ,5ರಿಂದ 7ನೇ ತರಗತಿ ಪ್ರಕೃತಿ ವಿಕೋಪ,8ರಿಂದ 10ನೇ ತರಗತಿ ತಾಯಿ ವಾತ್ಸಲ್ಯ, ಪಿಯುಸಿ ತುಳುನಾಡ ಸಂಸ್ಕೃತಿ ವಿಷಯದಲ್ಲಿ ನಡೆಯಲಿದೆ. ಸಂಜೆ ಗಂಟೆ 6 ರಿಂದ ಸಮಾರೋಪ ಸಮಾರಂಭದಲ್ಲಿ ಘಟಕದ ಪೂರ್ವಾಧ್ಯಕ್ಷ JFM ನಾಗಮಣಿ ಕೆದಿಲ ರವರಿಗೆ ಕಮಲಪತ್ರ ಪುರಸ್ಕಾರ ನಡೆಯಲಿದೆ. ಪಾಂಡಿಗದ್ದೆ ಸ.ಕಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಯಶೋಧರ ಕಳಂಜ ರವರಿಗೆ ಸನ್ಮಾನ ನಡೆಯಲಿದೆ. ಪರಿಸರದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಪಂಚಶ್ರೀ ವಿದ್ಯಾನಿಧಿ ಸಮರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕು. ಸುಮಾ ಕೋಟೆ ಇವರಿಂದ ಗಾನ ಸುಧೆ, ಸುಬ್ರಹ್ಮಣ್ಯ ಕೆ.ಎಸ್.ಎಸ್. ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ
ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ.