ಸೆಲ್ಕೋ ಸೊಲರ್ ಲೈಟ್ ಪ್ರವೇಟ್ ಲಿಮಿಟೆಡ್ ಬೆಂಗಳೂರು ಸುಳ್ಯ ಹಾಗೂ ಪುತ್ತೂರು ಶಾಖೆಯ ವತಿಯಿಂದ ನಿಂತಿಕಲ್ಲು ಧರ್ಮಶ್ರೀ ಅರ್ಕೇಡ್ ಮುಂಭಾಗ ಸೋಲಾರ್ ಮಾಹಿತಿ ಶಿಬಿರ ಕಾರ್ಯಕ್ರಮ ಆಯೋಜಿಸಿದ್ದು ಕಾರ್ಯಕಮವನ್ನು ಕರ್ನಾಟಕ ಬ್ಯಾಂಕ್ ನಿಂತಿಕಲ್ಲು ವ್ಯವಸ್ಥಾಪಕರಾದ ರಾಮಚಂದ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕರಾದ ಸುಧಾ ಹಿಮಕರ ಅವರು ಕ್ರಾರ್ಯಕ್ರಮ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಶುಭಕೋರಿದರು .









ಸೆಲ್ಕೋ ಸೋಲಾರ್ ಪುತ್ತೂರು ಹಿರಿಯ ವ್ಯವಸ್ಥಾಪಕರಾದ ಸುಧಕರ ಆಳ್ವ ಮಾಹಿತಿ ಶಿಬಿರದ ಉಪಯೋಗದ ಬಗ್ಗೆ ವಿವರಿಸಿದರು . ಮೂರು ದಿನಗಳಕಾಲ ಕಾರ್ಯಕ್ರಮ ನಡೆಯಲಿದ್ದು ಎಲ್ಲರೂ ಪ್ರಯೋಜನ ಪಡೆಯಬೇಕೆಂದು ಹೇಳಿದರು . ಕಾರ್ಯಕ್ರಮದಲ್ಲಿ ನಿಂತಿಕಲ್ಲು ಆಟೋಚಾಲಾಕರು, ಉದ್ಯಮಿಗಳು, ಸೆಲ್ಕೋ ಸಿಬ್ಬಂದಿಗಳು ಉಪಸ್ಥಿದರಿದ್ದರು .ಸೆಲ್ಕೋ ಸುಳ್ಯ ವ್ಯವಸ್ಥಾಪಕಾದ ಆಶಿಕ್ ಬಸವಪಾದೆ ಕಾರ್ಯಕ್ರಮ ಸ್ವಾಗತ, ಧನ್ಯವಾದ ನೆರವೇರಿಸಿದರು .








