ಬೆಳ್ಳಿರಥದ ಸ್ವಾಗತಕ್ಕೆ ಎಲಿಮಲೆಯಲ್ಲಿ ಪೂರ್ವಭಾವಿ ಸಭೆ
ಪ್ರಸಿದ್ಧ ಪುಣ್ಯಕ್ಷೇತ್ರವಾದ ಕುಕ್ಕೆಶ್ರೀ ಸುಬ್ರಹ್ಮಣ್ಯಕ್ಕೆ ಡಾ.ರೇಣುಕಾ ಪ್ರಸಾದ್ ಕೆ.ವಿ. ಮತ್ತು ಮನೆಯವರು ಬೆಳ್ಳಿರಥ ಸಮರ್ಪಣೆ ಮಾಡಲಿದ್ದು, ರಥವು ಸಾಗಿಬರುವ ರಸ್ತೆಯ ಎಲಿಮಲೆ ಪೇಟೆಯಲ್ಲಿ ಅದ್ದೂರಿ ಸ್ವಾಗತ ಮಾಡುವ ಬಗ್ಗೆ ಪೂರ್ವಭಾವಿ ಸಭೆ ಎಲಿಮಲೆಯ ಜ್ಞಾನದೀಪ ಶಾಲಾ ವಠಾರದಲ್ಲಿ ನಡೆಯಿತು.
ರಥವು ನ.5ರಂದು ಸುಳ್ಯದಿಂದ ಹೊರಟು ಸೋಣಂಗೇರಿ, ದುಗ್ಗಲಡ್ಕ, ದೊಡ್ಡತೋಟ, ಎಲಿಮಲೆ, ಗುತ್ತಿಗಾರು ಮೂಲಕ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಲುಪಲಿದೆ.








ಪೂರ್ವಭಾವಿ ಸಭೆಗೆ ಆಗಮಿಸಿದ ರಥ ಸಮರ್ಪಣಾ ಸಮಿತಿಯ ಪ್ರಮುಖರು, ನ್ಯಾಯವಾದಿ ದಿನೇಶ್ ಮಡಪ್ಪಾಡಿ, ಎ.ವಿ.ತೀರ್ಥರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಭವಾನಿಶಂಕರ ಅಡ್ತಲೆ, ಮೋಹನರಾಮ್ ಸುಳ್ಳಿ, ಹರೀಶ್ ಕಂಜಿಪಿಲಿ, ಪಿ.ಎಸ್ ಗಂಗಾಧರ, ಚಂದ್ರಶೇಖರ ಭಟ್ ತಳೂರು, ವಿಷ್ಣು ಭಟ್ ಮೂಲೆತೋಟ, ಮಹಾವೀರ ಜೈನ್, ರಾಧಾಕೃಷ್ಣ ಮಾವಿನಕಟ್ಟೆ, ದೊಟ್ಟಣ್ಣ ಬರೆಮೇಲು, ಕೃಷ್ಣಯ್ಯ ಮೂಲೆತೋಟ, ಶ್ರೀಧರ ಕೆರೆಮೂಲೆ, ಸಂಧ್ಯಾ ಉಬರಡ್ಕ, ಉದಯ ಚಳ್ಳ, ಗೋವಿಂದ ಅಳವುಪಾರೆ, ಪುರುಷೋತ್ತಮ ಸುಳ್ಳಿ, ಮುರಳೀಧರ ಪುನುಕುಟ್ಟಿ, ಗದಾಧರ ಬಾಳುಗೋಡು, ಸೋಮಶೇಖರ ಕೇಪುಳಕಜೆ, ರಾಜೇಶ್ ಬಟ್ಟೆಕಜೆ, ಕಿರನ್ ಗುಡ್ಡೆಮನೆ, ವಿನಯಚಂದ್ರ ಸುಳ್ಳಿ, ಜಯಾನಂದ ಪಟ್ಟೆ, ರಾಧಾಕೃಷ್ಣ ತುಪ್ಪದಮನೆ, ರಾಘವ ಆರ್ನೋಜಿ,, ವಸಂತ ಕಿರಿಭಾಗ, ದೇವಿಪ್ರಸಾದ್ ಕುದ್ಪಾಜೆ, ಜಯಂತ ತಳೂರು ಮತ್ತಿತರರು ಉಪಸ್ಥಿತರಿದ್ದರು.










