ತಹಶೀಲ್ದಾರ್ ಮಂಜುಳಾರವರಿಂದ ಪ್ರತಿಜ್ಞಾ ವಿಧಿ ಬೋಧನೆ ಹಾಗೂ ಕಾರ್ಯಕ್ರಮಕ್ಕೆ ಚಾಲನೆ
ವಿವಿಧ ಇಲಾಖಾಧಿಕಾರಿಗಳು, ವಿದ್ಯಾರ್ಥಿಗಳು ಪೊಲೀಸ್ ಸಿಬ್ಬಂದಿಗಳು ಭಾಗಿ

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಹಾಗೂ ಸುಳ್ಯ ವೃತ್ತದ ವತಿಯಿಂದ ರಾಷ್ಟ್ರೀಯ ಏಕತಾ ದಿವಸ 2025 ಕಾರ್ಯಕ್ರಮ ಅ 31ರಂದು ಸುಳ್ಯ ಪೊಲೀಸ್ ಠಾಣಾ ಆವರಣದಲ್ಲಿ ನಡೆಯಿತು.



ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.







ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ಐಕ್ಯತೆಗಾಗಿ ಓಟ ಕಾರ್ಯಕ್ರಮವನ್ನು ಆಯೋಜಿಸಿದ್ದು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಓಟದಲ್ಲಿ ಭಾಗವಹಿಸಿದ್ದರು.

ಸುಳ್ಯ ಠಾಣೆಯಿಂದ ಓಟ ಆರಂಭಿಸಿ ವಿವೇಕಾನಂದ ಸರ್ಕಲ್ ಬಳಿಕ ಶ್ರೀ ರಾಮಪೇಟೆ ರಸ್ತೆಯ ಮೂಲಕ ಸುಳ್ಯ ಠಾಣೆಗೆ ಮರಳಿ ಬಂದು ಸಮಾರೋಪಗೊಂಡಿತು.
ಸುಳ್ಯ ತಹಶೀಲ್ದಾರ್ ಶ್ರೀಮತಿ ಮಂಜುಳಾ ರವರು ಪ್ರತಿಜ್ಞಾವಿಧಿ ಬೋಧನೆ ಮಾಡಿ ಧ್ವಜವನ್ನು ಹಸ್ತಾಂತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಕುರಿತು ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಸಂತೋಷ್ ಕುಮಾರ್ ಬಿ ಪಿ ರವರು ಪ್ರಸ್ತಾವಿಕ ಮಾತನಾಡಿದರು.

ಸುಳ್ಯ, ಸುಬ್ರಹ್ಮಣ್ಯ,ಬೆಳ್ಳಾರೆ ಪೊಲೀಸ್ ಠಾಣೆಗಳ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ನಗರ ಪಂಚಾಯತ್ ಮುಖ್ಯ ಅಧಿಕಾರಿ ಬಸವರಾಜ್, ಸುಳ್ಯ ಅರಣ್ಯ ವಲಯ ಅಧಿಕಾರಿ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯಿಂದ ಪ್ರವೀಣ್ ಕುಮಾರ್, ಕೃಷಿ ಇಲಾಖೆಯಿಂದ ಗುರುಪ್ರಸಾದ್, ಗ್ರಾಮ ಲೆಕ್ಕಾಧಿಕಾರಿಗಳಾದ ತಿಪ್ಪೇಶ್ ಹಾಗೂ ಶಿವಕುಮಾರ್, ಸುಳ್ಯ ತಾಲೂಕು ಬಸು ವೈದ್ಯಾಧಿಕಾರಿ ಡಾ. ನಿತಿನ್ ಪ್ರಭು ,ಸಹಾಯಕ ನಿರ್ದೇಶಕರು ರವಿಚಂದ್ರ, ಸುಬ್ರಹ್ಮಣ್ಯ ಪಿ ಎಸ್ ಐ ಮಹೇಶ್, ಬೆಳ್ಳಾರೆ ತನಿಖಾ ವಿಭಾಗದ ಎಸ್ಐ ಕಿಶೋರ್, ಸುಳ್ಯ ಪೊಲೀಸ್ ಠಾಣಾ ತನಿಖಾ ವಿಭಾಗದ ಎಸ್ ಐ ಶ್ರೀಮತಿ ಸರಸ್ವತಿ ಬಿ ಟಿ,ರೋಟರಿ ಶಾಲಾ ದೈಹಿಕ ಶಿಕ್ಷಕ ರಂಗನಾಥ್ ಹಾಗೂ ವಿದ್ಯಾರ್ಥಿಗಳು, ವಿನೋಬನಗರ ಶಾಲಾ ದೈಹಿಕ ಶಿಕ್ಷಕ ವಿನಯ್ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎಸ್ ಐ ಸಂತೋಷ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಲಘು ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.










