








ವೀರವನಿತೆ ಕ್ರೀಡಾ ಮತ್ತು ಕಲಾ ಸಂಘ ಮಂಡೆಕೋಲು ಇದರ ವತಿಯಿಂದ ಯುವಜನ ಸಂಯುಕ್ತ ಮಂಡಳಿ ವತಿಯಿಂದ ಹಮ್ಮಿಕೊಂಡಿರುವ ಪಂಚಸಪ್ತತಿ 2025 , 75 ದಿನಗಳ ಸ್ವಚ್ಚತಾ ಅಭಿಯಾನದ ಅಂಗವಾಗಿ 5 ನೆಯ ಕಾರ್ಯಕ್ರಮವಾಗಿ ಮಂಡೆಕೋಲು ಗ್ರಾಮದ ಕನ್ಯಾನ ಬಸ್ ನಿಲ್ದಾಣ ಸ್ವಚ್ಚತೆ ಕಾರ್ಯಕ್ರಮ ನ.೦3 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪ್ರತಿಮಾ ಹೆಬ್ಬಾರ್ , ಮಹಾವಿಷ್ಣುಮೂರ್ತಿ ದೇವಸ್ಥಾನದ ಮಾಜಿ ಆಡಳಿತ ಮಂಡಳಿ ಅಧ್ಯಕ್ಷರು ಸೊಸೈಟಿ ನಿರ್ದೇಶಕರು ಆಗಿರುವ ಕೇಶವಮೂರ್ತಿ ಹೆಬ್ಬಾರ್ , ಸೊಸೈಟಿ ನಿರ್ದೇಶಕರಾದ ಲಕ್ಷ್ಮಣ ಉಗ್ರಾಣಿಮನೆ ಉಪಸ್ಥಿತರಿದ್ದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಅನಿಲ್ ತೋಟಪ್ಪಾಡಿ , ಹರಿಶ್ಚಂದ್ರ ಪಾತಿಕಲ್ಲು , ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ, ವೀರವನಿತೆ ಕ್ರೀಡಾ ಮತ್ತು ಕಲಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಸ್ತುವಾರಿ ನಿರ್ದೇಶಕಿ ವಿನುತ ಪಾತಿಕಲ್ಲು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಅಧ್ಯಕ್ಷೆ ವಸಂತಿ ಉಗ್ರಾಣಿಮನೆ ವಂದಿಸಿದರು.










