
ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ , ಅನುಗ್ರಹ ಶಿಕ್ಷಣ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ನ.1 ರಂದು ತರಂಗ್ 2K25 ವಾರ್ಷಿಕ ಉತ್ಸವ ನಡೆಯಿತು.

ಸುಬ್ರಹ್ಮಣ್ಯ ಗ್ರಾ.ಪಂ ಉಪಾಧ್ಯಕ್ಷ ರಾಜೇಶ್ ಎನ್.ಎಸ್
ಧ್ವಜಾರೋಹಣ ಮಾಡಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ
ನಡೆದು ಬೆಳಗ್ಗೆ 11 ರ ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಉಪಸ್ಥಿತರಿದ್ದರು.








ಕಾಳುಮೆಣಸಿನ ಪ್ರಗತಿಪರ ಕೃಷಿಕ ಸುರೇಶ್ ಬಲ್ನಾಡ್ ಅವರಿಗೆ
ಕುಮಾರ ನಾಯರ್ ಶ್ರೇಷ್ಠ ಪ್ರಶಸ್ತಿ ಪ್ರಶಸ್ತಿ ನೀಡಿ ಪುರಷ್ಕರಿಸಲಾಯಿತು.
ಅನುಗ್ರಹ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಗಣೇಶ್ ಪ್ರಸಾದ್, ಸಂಚಾಲಕ ಚಂದ್ರಶೇಖರ ಎನ್, ಉಪಾಧ್ಯಕ್ಷ ಶಿವರಾಮ ಏನೆಕಲ್ಲು, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ
ಡಾ. ಸಂಕೀರ್ತ್ ಹೆಬ್ಬಾರ್ , ಮುಖ್ಯೋಪಾಧ್ಯಾಯಿನಿ ವಿದ್ಯಾರತ್ನ ಹೆಚ್, ಪಿ.ಟಿ.ಎ ಅಧ್ಯಕ್ಷೆ ಭಾರತಿ ದಿನೇಶ್, ಸಿ.ಪಿ.ಎಲ್ ವಾಗೀಶ ಎಸ್.ಪಿ.ಎಲ್. ಗೌರವ್ ಬಿ ಡಿ ಮತ್ತಿತರರು ಉಪಸ್ಥಿತರಿದ್ದರು.










