







ಮೈಸೂರಿನಲ್ಲಿ ನವೆಂಬರ್ 1ರಂದುನಡೆದ 28 ನೇ ಆಲ್ ಇಂಡಿಯಾ ಶಿಟೋರಿಯೋ ಕರಾಟೆ ಡು ಚಾಂಪಿಯನ್ ಶಿಪ್ 2025ರಲ್ಲಿ ಸುಳ್ಯದ ಕೆ.ವಿ.ಜಿ. ಅಮರಜ್ಯೋತಿ ಪಿ.ಯು. ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಚಿರಂತ್ ಪಿ.ಎಮ್. ಪಡ್ಪು ಇವರು ಚಿನ್ನದ ಪದಕ ಗೆದ್ದುಕೊಂಡು ಜಪಾನಿನಲ್ಲಿ ನಡೆಯುವ ಏಷಿಯನ್ ಕರಾಟೆ ಚಾಂಪಿಯನ್ ಗೆ ಆಯ್ಕೆಯಾಗಿದ್ದಾರೆ.

ಇವರು ನಿವೃತ್ತ ಸೈನಿಕ ಮೋಹನ್ ಲಾಲ್ ಪಡ್ಪು ಮತ್ತು ಪವಿತ್ರಾಕ್ಷಿ ದಂಪತಿಯ ಪುತ್ರ. ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ರವರ ಶಿಷ್ಯ.










