ನಾವೂರಿನ ಲಕ್ಷ್ಮಿ ಕಲ್ಕುಡ ಪಟಾಕಿ ಅಂಗಡಿಯಲ್ಲಿ ಲಕ್ಕಿ ಕೂಪನ್ ಡ್ರಾ

0

ಅದೃಷ್ಟವಂತ ಗ್ರಾಹಕರಿಗೆ ಬೆಲೆ ಬಾಳುವ ಬಹುಮಾನಗಳು

ಸುಳ್ಯದ ನಾವೂರಿನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ತೆರೆಯಲಾದ ಶ್ರೀ ಲಕ್ಷ್ಮಿ ಕಲ್ಕುಡ ಪಟಾಕಿ ಅಂಗಡಿಯಲ್ಲಿ ಆಯೋಜಿಸಲಾದ ಲಕ್ಕಿ ಕೂಪನಿನ ಡ್ರಾವನ್ನು ನ. 3 ರಂದು ಗಣ್ಯರ ಸಮ್ಮುಖದಲ್ಲಿ ಡ್ರಾ ಮಾಡಲಾಯಿತು.

ಅ. 19 ರಿಂದ 24 ರ ತನಕ ಪಟಾಕಿ ವ್ಯಾಪಾರ ಮಾಡ ಲಾಗಿದ್ದು ರೂ.1000 ಕ್ಕಿಂತ ಹೆಚ್ಚಿನ ಖರೀದಿ ಮಾಡಿದ ಎಲ್ಲಾ ಗ್ರಾಹಕರಿಗೆ
ರೂ. 100 ರ ಕೂಪನ್ ನೀಡಲಾಗಿತ್ತು.ಈ ಕೂಪನಿನ ಡ್ರಾವನ್ನು ತುಳಸಿ ಪೂಜೆಯ ದಿನದಂದು ನ. 3 ರಂದು ಡ್ರಾ ಮಾಡಲಾಯಿತು.
ಅತಿಥಿಗಳಾಗಿ ಆಗಮಿಸಿದ ಕಲ್ಕುಡ ದೈವಸ್ಥಾನದ ಆಡಳಿತ ಧರ್ಮದರ್ಶಿ


ಪಿ. ಕೆ ಉಮೇಶ್, ನಗರ ಸೂಡಾ ಅಧ್ಯಕ್ಷ ಮುಸ್ತಾಫಾ ಕೆ. ಎಂ, ಎಸ್. ಸಿಕ್ಸ್ ಗೌರವಾಧ್ಯಕ್ಷ ಗೋಕುಲ್ ದಾಸ್, ಇಂಜಿನಿಯರ್ ಗಿರೀಶ್ ಪಾಲಡ್ಕ, ಉದ್ಯಮಿಗಳಾದ ಅನೂಪ್ ಪೈ, ಗುರುದತ್ ನಾಯಕ್, ನಾಸೀರ್ ಕಟ್ಟೆಕ್ಕಾರ್, ಪತ್ರಕರ್ತರಾದ ಹೇಮಂತ್ ಸಂಪಾಜೆ, ಶಿವಪ್ರಸಾದ್ ಆಲೆಟ್ಟಿ, ಭರತ್ ಪಿ. ಯು ರವರು ಚೀಟಿ ಎತ್ತುವ ಮೂಲಕ ಅದೃಷ್ಟ ವಂತರ ಆಯ್ಕೆ ನಡೆಸಿದರು. ವ್ಯಾಪಾರ ಮಳಿಗೆಯ ಪಾಲುದಾರ,ಯುವ ಉದ್ಯಮಿ ರವಿಚಂದ್ರ ಕೊಡಿಯಾಲಬೈಲು ಕಾರ್ಯಕ್ರಮ ನಿರೂಪಿಸಿದರು. ಪಾಲುದಾರರುಗಳಾದ
ಇಂಜಿನಿಯರ್ ಸೂರಜ್,


ಸನತ್ ಮೂರ್ಜೆ, ಧನರಾಜ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕೂಪನ್ ಆಯ್ಕೆಯಾದ ಅದೃಷ್ಟ ವಂತರಿಗೆ ಟಿ. ವಿ, ಹೋಮ್ ಥಿಯೇಟರ್, ಕೂಲರ್, ಮಿಕ್ಸಿ, ಕಾರ್ವನ್ ರೇಡಿಯೋ, ಇಂಡಕ್ಷನ್, ಐರನ್ ಬಾಕ್ಸ್, ಫ್ಯಾನ್, ಕ್ಯಾ ಟಲ್, ಹಾಟ್ ಬಾಕ್ಸ್ ಬಹುಮಾನಗಳನ್ನು ನೀಡಲಾಗುವುದು. ವಿಜೇತರು 30 ದಿನದ ಒಳಗಾಗಿ ಬಹುಮಾನ ಪಡೆದುಕೊಳ್ಳುವಂತೆ ಪಾಲುದಾರರು ತಿಳಿಸಿದರು.