
ಜಟ್ಟಿಪಳ್ಳ -ನೀರಬಿದಿರೆ- ದುಗ್ಗಲಡ್ಕ ರಸ್ತೆ ಕಾಂಕ್ರೀಟೀಕರಣಕ್ಕೆ ಶಾಸಕರಾದ ಕು.ಭಾಗೀರಥಿ ಮುರುಳ್ಯ ರವರು 45 ಲಕ್ಷ ವಿಶೇಷ ಅನುದಾನವನ್ನು ಒದಗಿಸಿಕೊಟ್ಟು ಕಾಮಗಾರಿ ಸಂಪೂರ್ಣಗೊಂಡಿದ್ದು ನ.3ರಂದು ಶಾಸಕಿ ಕು.ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ಹಾಗೂ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದರು.
















ಒಂದನೇ ವಾರ್ಡಿನಲ್ಲಿ ನ್ಯಾಯಬೆಲೆ ಅಂಗಡಿಯಿಂದ ಮುಂದುವರಿಸಿ ದುಗ್ಗಲಡ್ಕ ಶಾಲಾ ಸಮೀಪದವರೆಗೆ 5 ಲಕ್ಷ ಅನುದಾನ, ಕೂಟೇಲ್ ರಸ್ತೆಗೆ 1 ಲಕ್ಷ ಅನುದಾನ, ರಾಜೇಶ್ ಮಿಲಿಟರಿ ಅವರ ಮನೆಗೆ ಹೋಗುವ ರಸ್ತೆ,ಎರಡು ಲಕ್ಷ ಅನುದಾನದಲ್ಲಿ ಕುಸುಮಾಧರ ಅವರ ಮನೆಗೆ ಹೋಗುವ ರಸ್ತೆ, ಒಂದು ಲಕ್ಷ ಅನುದಾನ ಕಂದಡ್ಕ ಮೋರಿ ರಚನೆಗೆ ಹಾಗೂ ಎರಡು ಲಕ್ಷ ಅನುದಾನವನ್ನು ದುಗ್ಗಲಡ್ಕ ಒಂದನೆ ವಾರ್ಡಿನ ವಿವಿಧ ಕಡೆಗಳಿಗೆ ದಾರಿದೀಪ ಅಳವಡಿಕೆ ಹಾಗೂ ಲೈನ್ ವಿಸ್ತರಣೆಗೆ ಗುದ್ದಲಿಪೂಜೆ ನಡೆಯಿತು. ನ.ಪಂ.ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಎ ಇವರ ಅನುದಾನದಲ್ಲಿ ಈ ಕಾಂಕ್ರಿಟೀಕರಣ,ವಿವಿಧ ಕೆಲಸಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಎ, ನಗರಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಕುಸುಮಾಧರ ಎ.ಟಿ., ಕಾರ್ಯದರ್ಶಿ ನಾರಾಯಣ, ನಗರ ಪಂಚಾಯತ್ ಮುಖ್ಯಾಧಿಕಾರಿ ಬಸವರಾಜ್ ,ನಗರದ ಪ್ರಮುಖರಾದ ಅವಿನಾಶ್, ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಸಿಎ ಬ್ಯಾಂಕಿನ ನಿರ್ದೇಶಕರಾದ ಹೇಮಂತ್ ಕುಮಾರ್ ಕಂದಡ್ಕ, ವಾರ್ಡ್ ಅಧ್ಯಕ್ಷರಾದ ದಿನೇಶ್ ಮಣಿಯಾಣಿ, ಡಾ.ಕೇಶವ ಸುಳ್ಳಿ,ಮಾಜಿ ನ.ಪಂ. ಅಧ್ಯಕ್ಷರಾದ ಶೀಲಾವತಿ ಮಾಧವ, ಶೇಖರ್ ಕುದ್ಪಾಜೆ, ಧನಂಜಯ( ಮನು), ರೂಪೇಶ್ ನೀರಬಿದಿರೆ, ನಯನ, ರಾಜೇಶ್ ,ಬಾಲಸುಬ್ರಮಣ್ಯ, ದಯಾನಂದ ಸಾಲಿಯಾನ್, ಕುಸುಮಾಧರ ಎಸ್.ಎನ್., ಶಿವನ್ ಕಂದಡ್ಕ, ಮಹೇಂದ್ರ, ಲಕ್ಷ್ಮಣ, ಲೋಕೇಶ್, ಜಯರಾಮಗೌಡ, ನಾರಾಯಣ ಮಣಿಯಾಣಿ ದುಗ್ಗಲಡ್ಕ, ನಿರಂಜನ, ತಂಗವೇಲು ,ವಸಂತ ನೀರಬಿದಿರೆ,ಚಂದ್ರಶೇಖರ ಮೋಂಟಡ್ಕ ,ಪ್ರವೀಣ ಮೊದಲಾದವರು ಉಪಸ್ಥಿತರಿದ್ದರು.











