















ಯಾದವ ಸಭಾ ಪ್ರಾದೇಶಿಕ ಸಮಿತಿ ಬೆಳ್ಳಾರೆ ಇದರ ಆಶ್ರಯದಲ್ಲಿ ಡಿ. 14ರಂದು ಶ್ರೀ ಸತ್ಯನಾರಾಯಣ ಪೂಜೆ ನಡೆಸುವ ಬಗ್ಗೆ ಪೂರ್ವಭಾವಿ ಸಭೆ ಅ. 2ರಂದು ಪ್ರಾದೇಶಿಕ ಸಮಿತಿ ಅಧ್ಯಕ್ಷರಾದ ಕ್ಯಾಪ್ಟನ್ ಸುಧಾನಂದ ಮಣಿಯಾಣಿ ಯವರ ನೇತೃತ್ವದಲ್ಲಿ ಬೆಳ್ಳಾರೆಯಲ್ಲಿ ನಡೆಯಿತು. ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪೂಜೆ ನಡೆಸುವುದೆಂದು ತೀರ್ಮಾನಿಸಲಾಯಿತು.
ಸಭೆಯಲ್ಲಿ ಚಂದ್ರಹಾಸ ಮಣಿಯಾಣಿ ಪಡ್ಪು, ಕುಂಞಿರಾಮ ಮಣಿಯಾಣಿ ಕಾಪಿನಕಾಡು, ಸುಧಾಮ ಮಣಿಯಣಿ ಕಾಫಿನಕಾಡು, ಸಂತೋಷ ಭಾಯಂಬಾಡಿ, ಮನ್ವಿತ್ ಯಾದವ್, ನಾರಾಯಣ ಮಣಿಯಾಣಿ ಬೂಡು, ಶ್ರೀಮತಿ ರಾಜೀವಿ ಪರ್ಲಿಕಜೆ, ಶ್ರೀಮತಿ ಶಶಿಪ್ರಭಾ ಪೆರುವಾಜೆ, ಶ್ರೀಮತಿ ದಿವ್ಯಾ ಉಮಿಕ್ಕಳ ಮೊದಲಾದವರು ಭಾಗವಹಿಸಿದ್ದರು.










