ಪಾಕಾಶಾಸ್ತ್ರಜ್ಞ ವೆಂಕಪ್ಪ ನಾಯ್ಕ ದಡ್ಡು ನಿಧನ

0

ಪಾಕಾಶಾಸ್ತ್ರಜ್ಞ ಎಡಮಂಗಲ ಗ್ರಾಮದ ದಡ್ಡು‌ಮನೆ ವೆಂಕಪ್ಪ ನಾಯ್ಕರು ಅಸೌಖ್ಯದಿಂದ ನ. 1ರಂದು ಸ್ವಗೃಹದಲ್ಲಿ ನಿಧನರಾದರು. ಇವರಿಗೆ 58 ವರ್ಷ ವಯಸ್ಸಾಗಿತ್ತು. ಹಲವು ಸಮಯಗಳ ಹಿಂದೆ ಅಸೌಖ್ಯಕ್ಕೆ ಒಳಗಾದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಗುಣಮುಖರಾಗಿರಲಿಲ್ಲ.

ಅಡುಗೆ ವೃತ್ತಿಯನ್ನು ಮಾಡುತ್ತಿದ್ದ ಇವರು ನೂರಾರು ಕಡೆಗಳಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡುಗೆಯನ್ನು ಮಾಡಿದ್ದರು.

ಮೃತರು ಪತ್ನಿ ಶ್ರೀಮತಿ ಹರಿಣಾಕ್ಷಿ, ಪುತ್ರ ಕಿರಣ್, ಪುತ್ರಿ ಕವನ (ಕಾವ್ಯ) ಸೇರಿದಂತೆ 6 ಮಂದಿ ಸಹೋದರರು, ಮೂವರು ಸಹೋದರಿಯರನ್ನು ಅಗಲಿದ್ದಾರೆ.