ನಿವೃತ್ತ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ನೀಲಾವತಿ ಕತ್ಲಡ್ಕರಿಗೆ ನುಡಿನಮನ

0

ಜನ ಮೆಚ್ಚುವ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ – ವೆಂಕಟ್ ದಂಬೆಕೋಡಿ
ಅ. 25ರಂದು ನಿಧನರಾದ
ಪಶುವೈದ್ಯರಾಗಿದ್ದ ದಿ. ಡಾ. ಮೋಹನ ಗೌಡ ಕತ್ಲಡ್ಕರವರ ಧರ್ಮಪತ್ನಿ ನಿವೃತ್ತ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ನೀಲಾವತಿ ಮೋಹನ ಗೌಡ ಕತ್ಲಡ್ಕರಿಗೆ ನುಡಿನಮನ ಕಾರ್ಯಕ್ರಮ ನ. 6ರಂದು ಗುತ್ತಿಗಾರಿನ ದೇವಿ ಸಿಟಿ ಸಭಾಂಗಣದಲ್ಲಿ ನಡೆಯಿತು.
ಮೃತರಿಗೆ ನುಡಿನಮನ ಸಲ್ಲಿಸಿದ ಮಾಜಿ ಜಿ.ಪಂ. ಸದಸ್ಯ ವೆಂಕಟ್ ದಂಬೆಕೋಡಿ ಮಾತನಾಡುತ್ತಾ ನೀಲಾವತಿಯವರು ಜನ ಮೆಚ್ವಿದ ರೀತಿಯಲ್ಲಿ ಸೇವೆ ಸಲ್ಲಿಸಿದವರು.
ವಿವಾಹವಾಗಿ ಕೆಲವೇ ವರ್ಷಗಳಲ್ಲಿ ಪತಿಯನ್ನು ಕಳೆದುಕೊಂಡರೂ ತಮ್ಮ ಏಕೈಕ ಪುತ್ರಿಗೆ ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸವನ್ನು ನೀಡಿ ಬೆಳೆಸಿದ್ದಾರೆ. ಪರೋಪಕಾರಿಯಾಗಿದ್ದ ಅವರು ಉತ್ತಮ ಸೇವೆ ನೀಡುವ ಮೂಲಕ ಜನ ಮೆಚ್ಚಿದ ಸರಕಾರಿ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು.


ಬಳಿಕ ಎಸ್ ಮಣಿ, ಸಹುದ್ಯೋಗಿ ಶ್ರೀಮತಿ ಲಕ್ಷ್ಮೀ ಮೃತರಿಗೆ ನುಡಿನಮನ ಸಲ್ಲಿಸಿದರು. ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಭರತ್ ನೆಕ್ರಾಜೆ ಸ್ವಾಗತಿಸಿ, ಮೃತರ ಕೌಟುಂಬಿಕ ಹಿನ್ನೆಲೆಯನ್ನು ತಿಳಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಮೃತರ ಪುತ್ರಿ ದ.ಕ. ಜಿಲ್ಲಾ ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮ ನಿರೂಪಣಾಧಿಕಾರಿ ಶ್ರೀಮತಿ ರಶ್ಮಿ ಅಶೋಕ್, ಅಳಿಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ, ಮೊಮ್ಮಕ್ಕಳಾದ ಕು. ಸೃಷ್ಠಿ ಎನ್.ಎ, ಸೃಜನ್ ಗೌಡ ಎನ್.ಎ, ಸಹೋದರ
ಶಿವರಾಮ ಗೌಡ ಪಂಬೆತ್ತಾಡಿ, ಸಹೋದರಿಯರಾದ ಶ್ರೀಮತಿ ಪುಷ್ಪಾವತಿ ನರಸಿಂಹ ಗೌಡ ಕಾರ್ಜ ಮತ್ತು ಶ್ರೀಮತಿ ಕುಸುಮಾವತಿ ದೇವದಾಸ ಗೌಡ ಮೂವ ಸೇರಿದಂತೆ ಕುಟುಂಬಸ್ಥರು ಬಂಧುಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಷ್ಪನಮನ ಸಲ್ಲಿಸಿದರು.