ನಿಡ್ಯಮಲೆ ಸಮೀಪ ಕುಂಡಾಡು ರಸ್ತೆ ಬದಿ ಕಡವೆಯ ಮೃತದೇಹ ಪತ್ತೆ

0

ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ, ಪರಿಶೀಲನೆ

ನಿಡ್ಯಮಲೆ ಸಮೀಪ ಕುಂಡಾಡು ರಸ್ತೆ ಬದಿಯಲ್ಲಿ ಕಡವೆ ಯೊಂದರ ಮೃತ ದೇಹ ನವಂಬರ್ 28 ರಂದು ಬೆಳಿಗ್ಗೆ ಕಂಡು ಬಂದಿದ್ದು, ಗುಂಡುತ್ತಾಗಿ ಮೃತಪಟ್ಟಿರುವುದಾಗಿ ಸಂಶಯ ವ್ಯಕ್ತವಾಗಿದೆ.

ಬೆಳಗ್ಗಿನ ಜಾವ ಸ್ಥಳೀಯರಿಗೆ ಈ ದೃಶ್ಯ ಕಂಡು ಬಂದಿದ್ದು ಕೂಡಲೇ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಕಡವೆಯ ಮೃತ ದೇಹದ ಪರಿಶೀಲನೆ ನಡೆಸಿದ್ದು ಪಶುವೈದ್ಯಾಧಿಕಾರಿಗಳು ಮರಣೋತರ ಪರೀಕ್ಷೆ ಮಾಡಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಅಧಿಕಾರಿಗಳು ತನಿಖೆ ಕೈಗೊಂಡಿರುವುದಾಗಿಯೂ ತಿಳಿದು ಬಂದಿದೆ.