ಸೋಣಂಗೇರಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಧಾರ್ಮಿಕ ಮುಖಂಡ ಹಾಗೂ ಸಮಾಜಸೇವಕರಾದ ಕಿರಣ್ ಚಂದ್ರ ಪುಷ್ಪಗಿರಿಯವರು ನ. 28 ರಂದು ಭೇಟಿ ನೀಡಿ ನಿರ್ಮಾಣ ಕಾರ್ಯಗಳ ವೀಕ್ಷಣೆ ನಡೆಸಿದರು.

ಮಂದಿರದ ಆಡಳಿತ ಸಮಿತಿಯ ಸದಸ್ಯರೊಂದಿಗೆ ನೂತನ ಮಂದಿರ ನಿರ್ಮಾಣ ಮತ್ತು ಮುಂದಿನ ಅಭಿವೃದ್ಧಿ ಕುರಿತಾಗಿ ಸಮಾಲೋಚನೆ ನಡೆಸಿದ ಅವರು, ಮಂದಿರದ ನಿರ್ಮಾಣ ಕೆಲಸ ಪೂರ್ಣಗೊಳ್ಳಲು ತಾವು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.









ಮಂದಿರದ ಆಡಳಿತ ಸಮಿತಿಯ ಸದಸ್ಯರುಗಳು ಯಾವುದೇ ಕಾರಣಕ್ಕೂ ಮಂದಿರ ನಿರ್ಮಾಣ ಕೆಲಸದಲ್ಲಿ ವಿರಮಿಸದೆ, ಪೂರ್ಣಗೊಳ್ಳುವವರೆಗೆ ಸಮರ್ಪಿತವಾಗಿ ಶ್ರಮಿಸಬೇಕು ಎಂಬ ಸಲಹೆಯನ್ನೂ ಅವರು ನೀಡಿದರು. ಶ್ರಮಿಸುತ್ತಿರುವ ಎಲ್ಲರಿಗೂ ಶ್ರೀಕೃಷ್ಣನ ಕೃಪಾ ಅನುಗ್ರಹ ಇರಲೆಂದು ಹಾರೈಸಿದರು.

ಈ ಸಂದರ್ಭದಲ್ಲಿ ಸುಪ್ರೀತ್ ಮೋoಟಡ್ಕ, ಪ್ರಮೋದ್ ದಿಡುಪೆ, ಭಜನಾ ಮಂದಿರ ಸಮಿತಿಯ ಅಧ್ಯಕ್ಷ ಗಿರಿಧರ ಗೌಡ ನಾಯರ್ ಹಿತ್ಲು , ಕರುಣಾಕರ ಉಜಿರೆ, ಧನುಷ್ ಕೊಕ್ಕಡ, ಭರತ್ ಕುಪ್ಪೆಟ್ಟಿ, ಕಾರ್ಯದರ್ಶಿ ನಿರಂಜನ ಮಿತ್ತಮಜಲು, ಕೋಶಾಧಿಕಾರಿ ಶ್ರೀಮತಿ ಲೀಲಾವತಿ ನಡುಮನೆ, ಗೌರವ ಸಲಹೆಗಾರರಾದ ಎಸ್.ಎನ್. ಗೋಪಾಲಕೃಷ್ಣ, ಚಿದಾನಂದ ಗೋಪಾಲಕಜೆ, ಸದಾನಂದ ಹುಲಿಮನೆ, ಎಸ್.ಕೆ. ಭಾಸ್ಕರ ಗೌಡ ಕುಂಟಿಕಾನ, ಎಸ್.ಎನ್. ಲೋಕೇಶ್ ನಡುಮನೆ, ಸುಂದರ ರೈ ಶಾಂತಿನಗರ, ಎಸ್.ಎನ್. ರವೀಂದ್ರ ನಡುಮನೆ ಮತ್ತು ಸದಸ್ಯರಾದ ಶ್ರೀಮತಿ ಮೋಹಿನಿ ನಡುಮನೆ, ಶ್ರೀಮತಿ ಶುಭಾ ಕಾಡುತೋಟ, ಪ್ರಿಯಾಂಕ ಎಸ್.ಎನ್. ಸೋಣಂಗೇರಿ, ಪುರುಷೋತ್ತಮ ಆಚಾರ್ಯ ಕೆದಿಕ್ಕಾನ, ಹಿಮಾಂಶು ಬಿ.ಸಿ. ಸೋಣಂಗೇರಿ, ಮಂಜುನಾಥ ಮಡ್ತಿಲ ಉಪಸ್ಥಿತರಿದ್ದರು.











