ಕೇನ್ಯ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಮತ್ತು ಪರಿವಾರ ದೈವಗಳು ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ದಾರಂದ ಮುಹೂರ್ತ

0

ನೂತನವಾಗಿ ನಿರ್ಮಾಣಗೊಳ್ಳುತ್ತಿರುವ
ಬಳ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇನ್ಯ ಗ್ರಾಮದ ಕೇನ್ಯ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಮತ್ತು ಪರಿವಾರ ದೈವಗಳು ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನ ಬಿರ್ಕಿ ಇದರ ದಾರಂದ ಮುಹೂರ್ತ ಡಿ. 10ರಂದು ನೆರವೇರಿತು.
ದೈವಸ್ಥಾನದ ಜೀರ್ಣೋಧ್ಧಾರ ಸಮಿತಿಯ ಗೌರವಾಧ್ಯಕ್ಷರಾದ ರವೀಂದ್ರನಾಥ ಶೆಟ್ಟಿ ಕೇನ್ಯ ಶಿಲಾ ಕಲ್ಲಿನ ದಾರಂದವನ್ನು ಕೊಡುಗೆಯಾಗಿ ದೈವಸ್ಥಾನಕ್ಕೆ ನೀಡಿದ್ದರು. ಜೀರ್ಣೋಧ್ಧಾರ ಸಮಿತಿಯ ಗೌರವ ಸಲಹೆಗಾರಾದ ಪದ್ಮನಾಭ ರೈ ಗುತ್ತು ಅಗೋಳಿಬೈಲು, ಜೀರ್ಣೋಧ್ಧಾರ ಸಮಿತಿ ಅಧ್ಯಕ್ಷರಾದ ಪ್ರವೀಣ್ ಕಾರ್ಜ, ಜೀರ್ಣೋಧ್ಧಾರ ಸಮಿತಿ ಉಪಾಧ್ಯಕ್ಷ ಬಾಲಕೃಷ್ಣ ರೈ ಬಿರ್ಕಿ, ಆಡಳಿತ ಸಮಿತಿ ಅಧ್ಯಕ್ಷರಾದ ಮಾಯಿಲಪ್ಪ ನರಿಯಂಗ, ಉಪಾಧ್ಯಕ್ಷರಾದ ಚೋಮ ಕಾಳಮಜಲು, ಅಂಗಾರು ಕಾಂಜಿ, ಆಡಳಿತ ಸಮಿತಿ ಕಾರ್ಯದರ್ಶಿ ಮನೋಹರ ಕಾಂಜಿ, ಆಡಳಿತ ಸಮಿತಿಯ ಸದಸ್ಯರಾದ ಬಾಸ್ಕರ ಕೊಂಬಾರು ಸೇರಿದಂತೆ ಭಾಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.