ಅಸ್ವಸ್ಥಗೊಂಡು ವಾಂತಿ ಮಾಡಲು ಪ್ರಾರಂಭಿಸಿದ ಎರಡು ತಿಂಗಳ ಗಂಡು ಮಗು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರೂ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟ ಘಟನೆ ಗುತ್ತಿಗಾರು ಗ್ರಾಮದಿಂದ ವರದಿಯಾಗಿದೆ.

ಗುತ್ತಿಗಾರು ಗ್ರಾಮದ ಕಮಿಲದ ಮಾಧವ-ವೀಣಾ ದಂಪತಿಯ ಗಂಡು ಮಗು ನಿಶ್ಮಿತ್ ಡಿ.೮ ರಂದು ಮುಂಜಾನೆ ವಾಂತಿ ಮಾಡಲು ಆರಂಭಿಸಿದ್ದು, ಮನೆಯವರು ಮಗುವನ್ನು ಕುಂಬ್ರದ ಕ್ಲಿನಿಕ್‌ವೊಂದಕ್ಕೆ ಕರೆದುಕೊಂಡು ಹೋಗಿ ಔಷಧಿ ಪಡೆದುಕೊಂಡು ವಾಪಾಸು ಮಗುವಿನ ತಾಯಿಯು ತನ್ನ ಓಡಂತರ್ಯದಲ್ಲಿರುವ ತವರು ಮನೆಗೆ ಬಂದಿದ್ದರು.









ರಾತ್ರಿ ಮಗುವಿಗೆ ಮತ್ತೆ ಉಸಿರಾಟದ ಸಮಸ್ಯೆಯಾದ ಕಾರಣ ಮಗುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು.
ಮನೆಯವರು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಸರಕಾರಿ ವೆನ್ಹಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಅದರಂತೆ ಮಗುವನ್ನು ಡಿ.೯ ರಂದು ಮಂಗಳೂರಿನ ಸರಕಾರಿ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಷ್ಟರಲ್ಲಾಗಲೇ ವೈದ್ಯರು ಪರೀಕ್ಷಿಸಿ, ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮೃತ ಮಗುವಿನ ತಂದೆ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು
UDR NO. 31-2025 U/S 194 BNSS-2023 3 ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.









