Home Uncategorized ದೇವಚಳ್ಳ ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಳೆತೋಟ ನಾರಾಯಣ ಗೌಡ ನಿಧನ

ದೇವಚಳ್ಳ ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಳೆತೋಟ ನಾರಾಯಣ ಗೌಡ ನಿಧನ

0

ದೇವಚಳ್ಳ ಗ್ರಾ.ಪಂ. ಮಾಜಿ ಅಧ್ಯಕ್ಷ, ಹಿರಿಯ ಬಿಜೆಪಿ ನಾಯಕ ಬಾಳೆತೋಟ ನಾರಾಯಣ ಗೌಡರು ಅಲ್ಪ ಕಾಲದ ಅಸೌಖ್ಯದಿಂದ ನಿನ್ನೆ ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ಸಮಯದಿಂದ ವಹೋ ಸಹಜ ಅಸೌಖ್ಯದಿಂದ ಬಳಲುತ್ತಿದ್ದ ಅವರನ್ನು ನಿನ್ನೆ ಸುಳ್ಯ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿ ಕರೆತರಲಾಗಿತ್ತು. ರಾತ್ರಿ ವೇಳೆ ನಿಧನರಾದರು.

ಮೃತರು ಪತ್ನಿ , ಪುತ್ರರಾದ ಧನಂಜಯ , ದೇವಪ್ಪ, ದಿವಾಕರ, ಗಿರೀಶ್, ಪುತ್ರಿಯರಾದ ಸುಜಾತ , ಕಾವೇರಿ , ಪುಷ್ಪ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಾಯಕರಲ್ಲೊಬ್ಬರಾದ ನಾರಾಯಣ ಗೌಡರು ಹಲವು ನಾಯಕರ ಒಡನಾಟ ಹೊಂದಿದ್ದರು. ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಹಲವು ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ, ಸಾಮಾಜಿಕ ಸೇವೆಗಳಲ್ಲಿ ಮುಂಚೂಣಿಯಲ್ಲಿದ್ದರು.

ನಾರಾಯಣ ಗೌಡರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಇಂದು ಅಪರಾಹ್ನ ಅವರ ಸ್ವಗೃಹದಲ್ಲಿ ನಡೆಯಲಿರುವುದಾಗಿ ತಿಳಿದುಬಂದಿದೆ.

NO COMMENTS

error: Content is protected !!
Breaking