ಜೀವ ಉಳಿಸುವ ರಕ್ಷಣಾ ಕೌಶಲ್ಯದ ಅರಿವು ಎಲ್ಲರಿಗೂ ಅಗತ್ಯ : ಪಿ.ಬಿ ಸುಧಾಕರ್ ರೈ

0

ಬೆಳ್ಳಾರೆಯಲ್ಲಿ ಜೀವ ರಕ್ಷಕ್, ಸಿ.ಪಿ.ಆರ್ ತರಬೇತಿ ಕಾರ್ಯಗಾರ


ತುರ್ತು ಸಂದರ್ಭದಲ್ಲಿ ಹೃದಯ ಸ್ಥoಭನ ಮತ್ತು ಉಸಿರಾಟದ ತೊಂದರೆಯ ಸಂಧರ್ಭದಲ್ಲಿ ಸಿ.ಪಿ ಆರ್ ಮೂಲಕ ಜೀವ ರಕ್ಷ ಣಾ ಕೌಶಲ್ಯದಿಂದ ಅನೇಕ ಜೀವಗಳನ್ನು ಉಳಿಸಬಹುದು ಎಂದು ಸುಳ್ಯ ತಾಲೂಕು ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಪಿ. ಬಿ ಸುಧಾಕರ ರೈ ಹೇಳಿದರು.

ಅವರು ಬೆಳ್ಳಾರೆಯ ಪೆರುವಾಜೆ, ಡಾ. ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿ.13ರಂದು ಯುವಜನ ಸಂಯುಕ್ತ ಮಂಡಳಿ ಸುಳ್ಯ, ಸ್ನೇಹಿತರ ಕಲಾ ಸಂಘ ಬೆಳ್ಳಾರೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ತಾಲೂಕು, ಡಾ. ಕೆ ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಪೆರುವಾಜೆ ಇದರ ಸ್ನಾತಕ ಸಮಾಜ ಕಾರ್ಯ ವಿಭಾಗ ಮತ್ತು ಯೂತ್ ರೆಡ್ ಕ್ರಾಸ್ ಘಟಕ ಆಶ್ರಯದಲ್ಲಿ ಮತ್ತು ಎ ಜೆ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ಮಂಗಳೂರು ಇವರ ಸಾಹಕಾರದೊಂದಿಗೆ ನಡೆದ ಸಿ.ಪಿ.ಆರ್, ತರಬೇತಿ – ಜೀವ ರಕ್ಷಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಡಾ. ಕೆ ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಪೆರುವಾಜೆಯ ಪ್ರಾoಶುಪಾಲ ಬಾಲಸುಬ್ರಹ್ಮಣ್ಯ ಪಿ. ಎಸ್ ಅಧ್ಯಕ್ಷತೆ ವಹಿಸಿದ್ದರು. ಎಜೆ ಆಸ್ಪತ್ರೆ ಮತ್ತು ಮಂಗಳೂರಿನ ಸಂಶೋಧನಾ ಕೇಂದ್ರ ತುರ್ತು ಚಿಕಿತ್ಸಾ ತಂತ್ರಜ್ಞರಾದ ಪುಸೈಲಾ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಗಾರ ನಡೆಸಿಕೊಟ್ಟರು. ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತಡ್ಕ, ಬೆಳ್ಳಾರೆ ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ವಸಂತ ಗೌಡ ಪಡ್ಪು, ಕಾಲೇಜು ವಿದ್ಯಾರ್ಥಿ ಕ್ಷೇಮ ಪಾಲಕ ಡಾ. ರಾಮಚಂದ್ರ ಕೆ ಉಪಸ್ಥಿತರಿದ್ದರು. ಕಾಲೇಜು ಐಕ್ಯೂ ಐ ಸಿ ಸಂಚಾಲಕಿ ಡಾ. ಸುಪ್ರಿಯಾ ಪಿ.ಆರ್ ಪ್ರಸ್ತಾವಿಸಿದರು. ದ್ವಿತೀಯ ಸಮಾಜ ಕಾರ್ಯ ವಿಭಾಗ ವಿದ್ಯಾರ್ಥಿ ದುರ್ಗಾ ಪ್ರಸಾದ್ ಸ್ವಾಗತಿಸಿ, ಪ್ರಥಮ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿ ಶಮಿತ್ ವಂದಿಸಿದರು ತೃತೀಯ ಸಮಾಜ ಕಾರ್ಯ ವಿಭಾಗ ವಿದ್ಯಾರ್ಥಿನಿ ಮೋಹಿನಿ ಕಾರ್ಯಕ್ರಮ ನಿರೂಪಿಸಿದರು.ಎ ಜೆ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ಮಂಗಳೂರು ಇಲ್ಲಿಯ ಪಬ್ಲಿಕ್ ರಿಲೇಷನ್ ಆಫಿಸರ್ ಕಾರ್ತಿಕ್ ಸಹಕರಿಸಿದರು.