670 ಪ್ರಕರಣಗಳಲ್ಲಿ 403 ಪ್ರಕರಣಗಳು ರೂ.2.23 ಕೋಟಿಗೂ ಮಿಕ್ಕಿ ಇತ್ಯರ್ಥ
ಸುಳ್ಯ ನ್ಯಾಯಾಲಯದಲ್ಲಿ ಡಿ.೧೩ ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ಎರಡೂ ನ್ಯಾಯಾಲಯದಲ್ಲಿ ಒಟ್ಟು ೬೭೦ ಪ್ರಕರಣಗಳಲ್ಲಿ ೪೦೩ ಪ್ರಕರಣಗಳು ರೂ ೨ ಕೋಟಿ ೨೩ ಲಕ್ಷದ ೩೭ ಸಾವಿರದ ೯೪೦ ರೂಗಳು ಇತ್ಯರ್ಥಗೊಂಡಿತು.
ಹಿಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಬಿ ಮೋಹನ್ ಬಾಬು ರವರ ನೇತೃತ್ವದಲ್ಲಿ ಒಟ್ಟು 394 ಪ್ರಕರಣಗಳಲ್ಲಿ 170 ಪ್ರಕರಣಗಳು ರೂ.1,69,91,004/- ಇತ್ಯರ್ಥ ಗೊಂಡಿದ್ದು. ಅದರಲ್ಲಿ (ಕ್ರಿಮಿನಲ್ ಪ್ರಕರಣಗಳು 194 ರಲ್ಲಿ 138 ಪ್ರಕರಣಗಳು ರೂ 93,71,004/- ರ ಮೂಲಕ ಹಾಗೂ ಸಿವಿಲ್ ಪ್ರಕರಣಗಳು 200 ರಲ್ಲಿ 32 ಪ್ರಕರಣಗಳು ರೂ.76,20,000/- ರ ಮೂಲಕ ಇತ್ಯರ್ಥಗೊಂಡಿದೆ.
ಸಿವಿಲ್ ನ್ಯಾಯಾಲಯದಲ್ಲಿ ಸಿವಿಲ್ ನ್ಯಾಯಾಧೀಶೆ ಅರ್ಪಿತಾ ರವರ ನೇತೃತ್ವದಲ್ಲಿ ಒಟ್ಟು 276 ಪ್ರಕರಣಗಳಲ್ಲಿ 233 ಪ್ರಕರಣಗಳು ರೂ. 53,46,936/- ಇತ್ಯರ್ಥ ಗೊಂಡಿರುತ್ತದೆ.ಅದರಲ್ಲಿ (ಕ್ರಿಮಿನಲ್ ಪ್ರಕರಣಗಳು 266 ರಲ್ಲಿ 221 ಪ್ರಕರಣಗಳು ರೂ. 53,45,936/- ರ ಮೂಲಕ ಹಾಗೂ ಸಿವಿಲ್ ಪ್ರಕರಣಗಳು 10 ರಲ್ಲಿ 12 ಪ್ರಕರಣಗಳು ರೂ. 1000/- ರ ಮೂಲಕ ಇತ್ಯರ್ಥಗೊಂಡಿದೆ.









ಪೂರ್ವ ವ್ಯಾಜ್ಯ ಪ್ರಕರಣಗಳಲ್ಲಿ ಬ್ಯಾಂಕ್ ಸಾಲ ವಸೂಲಾತಿ 3 ಪ್ರಕರಣಗಳು ರೂ. 249388/- ಕ್ಕೆ ಇತ್ಯರ್ಥ ಗೊಂಡದ್ದು,ಆಸ್ತಿ ತೆರಿಗೆಯು 293 ಜನರಿಂದ ರೂ. 24,66,000/- ಸಂಗ್ರಹವಾಗಿದೆ.
ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ 1013 ಜನರಿಂದ ರೂ. 4,81,300 /- ಸಂಗ್ರಹವಾಗಿದೆ.
ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸಂಧಾನಕಾರರಾಗಿ ವಕೀಲರಾದ ಶ್ರೀಮತಿ ಉಷಾ ಪಿ ಎ, ಸಿವಿಲ್ ನ್ಯಾಯಾಲಯದಲ್ಲಿ ಸಂಧಾನಕಾರರಾಗಿ ಕು. ಕೆ ಜಿ ಸಹಕರಿಸಿದರು.



