ಆಲೆಟ್ಟಿ ಶ್ರೀ ಸದಾಶಿವ ಭಜನಾ ಸಂಘದ ಮಾಸಿಕ ಸಭೆಯು ಸಂಘದ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಯವರ ಅಧ್ಯಕ್ಷತೆಯಲ್ಲಿ
ಡಿ. 14 ರಂದು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.









ಈ ಸಂದರ್ಭದಲ್ಲಿ 2024-25 ನೇ ಸಾಲಿನ ಅಯ ವ್ಯಯದ ಲೆಕ್ಕ ಪತ್ರವನ್ನು ಕೋಶಾಧಿಕಾರಿ ಸುಂದರ ಆಲೆಟ್ಟಿ ಯವರು ಮಂಡಿಸಿದರು.
ಮುಂದಿನ ವರ್ಷ ನಡೆಯಲಿರುವ ಏಕಾಹ ಭಜನೆ ಕಾರ್ಯಕ್ರಮದ ಕುರಿತು ವಿಚಾರ ವಿಮರ್ಶೆ ನಡೆಸಲಾಯಿತು. ಸಂಘದ ವತಿಯಿಂದ ಭಜನಾ ಸ್ಪರ್ಧೆ ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು, ಗೌರವಾಧ್ಯಕ್ಷ ಅಚ್ಚುತ ಮಣಿಯಾಣಿ ಆಲೆಟ್ಟಿ, ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ಸದಸ್ಯರಾದ ವಿಜಯ ಕುಮಾರ್ ಆಲೆಟ್ಟಿ,ದಿನೇಶ್ ಆಲೆಟ್ಟಿ, ಅಶ್ವತ್ ಆಲೆಟ್ಟಿ, ಧನಂಜಯ ಆಲೆಟ್ಟಿ, ಅವಿನ್ ಆಲೆಟ್ಟಿ, ಮಿಥುನ್ ಆಲೆಟ್ಟಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಪ್ರವೀಣ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.




