








ದಿನಾಂಕ 14.12 .2025 ರಂದು ಯಾದವ ಪ್ರಾದೇಶಿಕ ಸಮಿತಿ ಬೆಳ್ಳಾರೆ ಇದರ ವತಿಯಿಂದ ವರ್ಷಂ ಪ್ರತಿ ನಡೆಯುವಂತೆ ಈ ವರ್ಷವೂ ಕೂಡ ಸತ್ಯನಾರಾಯಣ ಪೂಜೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಗೌರಿಪುರಂ ಬೆಳ್ಳಾರೆ ಇಲ್ಲಿ ನಡೆಯಿತು.ಇದರ ಸಭಾಧ್ಯಕ್ಷತೆಯನ್ನು ಯಾದವ ಸಭಾ ಪ್ರಾದೇಶಿಕ ಸಮಿತಿ ಬೆಳ್ಳಾರೆ ಇದರ ಅಧ್ಯಕ್ಷರಾದ ಕ್ಯಾಪ್ಟನ್ ಸುದಾನಂದ ಮಣಿಯಾಣಿ ಪೆರುವಾಜೆ ಇವರು ವಹಿಸಿದರು.ಹಾಗೂ ಅತಿಥಿಗಳಾಗಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಏ.ಕೆ.ಮಣಿಯಾಣಿ,ತಾಲೂಕು ಸಮಿತಿ ಅಧ್ಯಕ್ಷರಾದ ಶ್ರೀ ಕರುಣಾಕರ ಹಾಸ್ಟರೆ, ತಾಲೂಕು ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಜಯಕೃಷ್ಣ,ತಾಲೂಕು ಯುವ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಸಾವಿತ್ರಿ ಕಣೆಮರಡ್ಕ,ಪ್ರಾದೇಶಿಕ ಸಮಿತಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಪುಷ್ಪಾವತಿ ಬಾಳಿಲ,ಹಾಗೂ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿಯಾದ ಸಂತೋಷ್ ಕುಮಾರ್ ಬಿ.ಕೆ ಇವರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಚಂದ್ರಹಾಸ ಮಣಿಯಾಣಿ ಪಡ್ಪು ಇವರು ನಿರೂಪಿಸಿದರು.ಶಶಿಧರ ಮಣಿಯಾಣಿ ಬೀಡು ಇವರು ಪ್ರಾರ್ಥನೆಯನ್ನು ಮಾಡಿದರು.ಸಂತೋಷ್ ಕುಮಾರ್ ಇವರು ಎಲ್ಲರನ್ನೂ ಸ್ವಾಗತಿಸಿದರು.ಲಾಯರ್ ಪದವಿಯನ್ನು ಪೂರ್ಣಗೊಳಿಸಿದ ಕುಮಾರಿ ಅಂಜಲಿ ಮತ್ತು ಕುಮಾರಿ ಆಶ್ರೀತ ಇವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಹಾಗೂ ಎಸ್ ಎಸ್ ಎಲ್ ಸಿ ಪಿಯುಸಿ ಮತ್ತು ಪದವಿಯಲ್ಲಿ ಪದವಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.ಹಾಗೂ ಗ್ರಂಥ ಪಾಲಾಕಿಯಾಗಿದ್ದು ಈಗ ಗ್ರಂಥ ಪಾಲಕರ ಜಿಲ್ಲಾಧ್ಯಕ್ಷರಾಗಿರುವಶ್ರೀಮತಿ ಸಾವಿತ್ರಿ ಕಣೆಮರಡ್ಕ ಮತ್ತು
ಮತ್ತು ಆಹಾರ ಇಲಾಖೆಯಲ್ಲಿ ಮುಂಬಡ್ತಿಯನ್ನು ಪಡೆದಿರುವಂತಹ ಚಂದ್ರಹಾಸ ಮಣಿಯಾಣಿ ಪಡ್ಪು ಇವರನ್ನು ಸನ್ಮಾನಿಸಲಾಯಿತು.ಪ್ರಾದೇಶಿಕ ಸಮಿತಿಯ ಸದಸ್ಯರು, ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಸಿದರು ಕೊನೆಗೆ ಸಹಪ್ರಸಾದಭೋಜನ ಮಾಡಲಾಯಿತು ಹಾಗೂ ಎಲ್ಲರಿಗೂ ಸಂತೋಷ್ ಕುಮಾರ್ ಇವರು ಧನ್ಯವಾದ ಅರ್ಪಿಸಿದರು.








