ಚಂದ್ರಶೇಖರ್ ನೆಟ್ಟಾರು ರಾಜ್ಯ ಮಟ್ಟಕ್ಕೆ ಆಯ್ಕೆ

0

ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಡಿ. 14 ರಂದು ನಡೆದ ಕೊಡಗು,ಉಡುಪಿ, ದಕ್ಷಿಣ ಕನ್ನಡ ಮಾಸ್ಟರ್ಸ್ ಆಂತರ್ ಜಿಲ್ಲಾ ಮಟ್ಟದ 400ಮೀ, 800ಮೀ, ಎತ್ತರ ಜಿಗಿತದ ಸ್ಪರ್ದೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ಕೋಲಾರದಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಸ್ತುತ ಇವರು ಫೀಸ್ ಶಾಲೆ ಸುಳ್ಯ ಹಾಗೂ ಬುಶ್ರಾ ಶಾಲೆ ಕಾವು ಇದರ ಅಥ್ಲೇಟಿಕ್ಸ್ ತರಬೇತುದಾರರಾಗಿದ್ದಾರೆ. ಆಸರೆ ಕ್ರೀಡಾ ಸಂಘ ನೆಟ್ಟಾರು ಇದರ ಅಧ್ಯಕ್ಷರಾಗಿ,ಅಕ್ಷಯ ಯುವಕ ಮಂಡಲ (ರಿ) ನೆಟ್ಟಾರು, ಪ್ರೆಂಡ್ಸ್ ಕ್ಲಬ್ ನೆಟ್ಟಾರು ಇದರ ಸಕ್ರೀಯ ಸದಸ್ಯರಾಗಿರುತ್ತಾರೆ.