ಸುಳ್ಯದ ಅಶ್ವಿಜ್ ಅತ್ರೇಯರಿಗೆ ಡಾ.ಶಿವರಾಮ ಕಾರಂತ ಬಾಲಪುರಸ್ಕಾರ

0

ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ವತಿಯಿಂದ ನೀಡುವ ಐದನೇ ವರ್ಷದ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಸುಳ್ಯದ ಅಶ್ವಿಜ್ ಅತ್ರೇಯ ಆಯ್ಕೆಯಾಗಿದ್ದು
ನ.30 ರಂದು ಕೋಟ ಕಾರಂತ ಥೀಮ್ ಪಾರ್ಕ್ ನಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.

ಗಾಯನ, ನಟನೆ, ಮಿಮಿಕ್ರಿ ಸೇರಿ ಕಲಾ ರಂಗದಲ್ಲಿ ಸಕ್ರೀಯನಾದ ಅಶ್ವಿಜ್ ಸುಳ್ಯದ ಪ್ರಭು ಬುಕ್ ಸೆಂಟರ್ ನ ಮಾಲಕರಾದ ರಾಮಚಂದ್ರ ಹಾಗೂ ಉಷಾ ದಂಪತಿಗಳ ಪುತ್ರ.ಸುಳ್ಯ ಸೈಂಟ್ ಜೋಸೆಫ್ ಶಾಲೆಯ 8ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.