ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಧನುಪೂಜೆ ಆರಂಭ

0

ಜ‌14ರ ವರೆಗೆ ನಡೆಯಲಿರುವ ಪೂಜೆ

ಹರಿಹರ ಪಲ್ಲತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಡಿ.16ರಂದು ಧನುಪೂಜೆ ಪ್ರಾರಂಭಗೊಂಡಿದ್ದು, ಧನುರ್ಮಾಸದ ಮೊದಲ ದಿನದಂದು ಹಲವಾರು ಭಕ್ತಾದಿಗಳು ಉಪಸ್ಥಿತರಿದ್ದರು.

ಜ.14 ರವರೆಗೆ ಪ್ರತೀದಿನ ಪ್ರಾತಃಕಾಲ 5:30ಕ್ಕೆ ಧನುಪೂಜೆ ನಡೆಯಲಿದ್ದು, ಜ.14 ಮಕರ ಸಂಕ್ರಮಣದ ದಿನ ಪ್ರಾತಃಕಾಲ 4:00 ಗಂಟೆಯಿಂದ ಉದ್ಯಾಪನ ಧನುಪೂಜೆ ಹಾಗೂ ಧನುಪೂಜೆ ಸಮಾಪ್ತಿ ಹಾಗೂ ಮದ್ಯಾಹ್ನ ವನಶಾಸ್ತವೇಶ್ವರನ ವಾರ್ಷಿಕ ಪೂಜೆ ಮತ್ತು ವನಭೋಜನ ಕಾರ್ಯಕ್ರಮ ನಡೆಯಲಿದೆ. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಗದೀಶ್ ಪಡ್ಪು, ಸಮಿತಿ ಸದಸ್ಯರು ಉಪಸ್ಥಿತರಿದ್ದರು.