Home Uncategorized ಡಿ.19 ರಿಂದ ಕುಂಭಕ್ಕೊಡು ಮಖಾಂ ಉರೂಸ್ ಪ್ರಾರಂಭ

ಡಿ.19 ರಿಂದ ಕುಂಭಕ್ಕೊಡು ಮಖಾಂ ಉರೂಸ್ ಪ್ರಾರಂಭ

0

ಡಿ.22 : ಸಮಾರೋಪ ಸಮಾರಂಭ ವಿಧಾನಸಭಾಧ್ಯಕ್ಷ ಯು. ಟಿ. ಖಾದರ್ ಅಗಮನ

ಸುಳ್ಯ ಅಲೆಟ್ಟಿ ಗ್ರಾಮದ ಕುಂಭಕ್ಕೊಡಿ‌ ನಲ್ಲಿ ಇತಿಹಾಸ ಪ್ರಸಿದ್ಧವಾದ ವಲಿಯುತ್ತುಲ್ಲಾಹಿ ಮಣವಾಟಿ ಬೀವಿ ಮಖಾಂ ಉರೂಸ್ ಡಿ. 19 ರಿಂದ ಡಿ.22 ರವರೆಗೆ ನಡೆಯಲಿದೆ.
ಡಿ.19 ರಂದು ಉದ್ಘಾಟನಾ ಸಮಾರಂಭ
ಬೆಳಿಗ್ಗೆ ಧ್ವಜಾರೋಹಣ ಇಬ್ರಾಹಿಂ ಹಾಜಿ ಕೊಯಂಗಿ ನೆರವೆರಿಸಲಿದ್ದಾರೆ.
ಸಯ್ಯದ್ ಕುಂಞಿಕೋಯ ತಂಙಳ್ ಸುಳ್ಯ ದುವಾಶಿರ್ವಚನ ಮೂಲಕ ಉರೂಸ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಮಹಮ್ಮದ್ ಇರ್ಷಾದ್ ಅಝ್ಹರಿ ಮಲಪುರಂ ರವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಡಿ.20 ರಂದು ಮೊಗರ್ಪಣೆ ಜುಮ್ಮಾ ಮಸೀದಿ ಖತೀಬರಾದ ಮುದುಗಡ ಅಬ್ದುಲ್ ಖಾದರ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.


ಡಿ.21 ರಂದು ಮಹಮ್ಮದ್ ಆಲಿ ಸಖಾಫಿ ಕುಯಿತ್ತಲ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಡಿ.22 ಸಮಾರೋಪ ಸಮಾರಂಭ ಹಾಗೂ ಅನ್ನದಾನ
ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಉರೂಸ್ ಮೌಲಿದ್ ಮತ್ತು ಮಖಾಂ ಝಿಯಾರತ್ ನೇತ್ರತ್ವವನ್ನು ಸಯ್ಯದ್ ಉಮ್ಮರ್ ಜಿಪ್ರಿ‌ ಅಲ್ ಹನೀಫಿ ಕೊಡಿಙಿ ಮಲಪುರಂ ರವರು ವಹಿಸಲಿದ್ದಾರೆ.
ಸಮಾರೋಪ ಕಾರ್ಯಕ್ರಮವನ್ನು ಸಯ್ಯದ್ ಅಬ್ದುಲ್ ರಹ್ಮಾನ್ ಮಶ್ಹೂದ್ ಅಲ್ ಬುಖಾರಿ ಕೂರತ್ ಉದ್ಘಾಟಿಸಲಿದ್ದಾರೆ.


ಸಮಾರೋಪ ದುವಾಶಿರ್ವಚನ ಸಯ್ಯದ್ ಶಿಹಾಬುದ್ದೀನ್ ಅಲ್ ಅಹ್ದಲ್ ಮುತ್ತನ್ನೂರು ತಂಙಳ್ ನೀಡಲಿದ್ದಾರೆ.
ಕರ್ನಾಟಕ ಸರಕಾರ ವಿಧಾನಸಭಾಧ್ಯಕ್ಷ ಡಾ.ಯು ಟಿ ಖಾದರ,ಕರ್ನಾಟಕ ಕನಿಷ್ಠ ವೇತನ ಸಮಿತಿ ಅಧ್ಯಕ್ಷ ಟಿ.ಎಂ ಶಹೀದ್ ಸೇರಿದಂತೆ ಅನೇಕ ಗಣ್ಯ ಅತಿಥಿಗಳು ಬಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದ ಕೊನೆಯಲ್ಲಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಜಮಾಯತ್ ಕಮಿಟಿ ಹಾಗೂ ಉರೂಸ್ ಕಮಿಟಿ ಪಧಾದಿಕಾರಿಗಳು ತಿಳಿಸಿದ್ದಾರೆ

NO COMMENTS

error: Content is protected !!
Breaking