ತಾಲೂಕು ಮಟ್ಟದ ಚೆಸ್ ಸ್ಪರ್ಧೆ ಸ್ಪರ್ಧೆಯಲ್ಲಿ ಲಹರಿ ರಾವ್ ಪ್ರಥಮ

0

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಯುಕೆಜಿಯ ವಿದ್ಯಾರ್ಥಿನಿ ಲಹರಿ ರಾವ್, ಸುಳ್ಯ ತಾಲೂಕು ಚೆಸ್ ಅಸೋಸಿಯೇಷನ್ – ರೋಟರಿ ಕ್ಲಬ್ ಸುಳ್ಯ, ಇವರು ನಡೆಸಿದ ತಾಲೂಕು ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಏಳು ವರ್ಷದ ಒಳಗಿನ ವಯೋಮಾನದ ವಿಭಾಗದಲ್ಲಿ ಲಹರಿ ರಾವ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಅದೇ ರೀತಿ 29ನೇ ಅಂತರಾಷ್ಟ್ರೀಯ ಫಿಡೆ ರೇಟೆಡ್ ರಾಪಿಡ್ ಚೆಸ್ ಕಪ್ – ಆಯೋಜಿಸಿದ ಚೆಸ್ ಸ್ಪರ್ಧೆಯಲ್ಲಿ ಐದನೇ ಸ್ಥಾನವನ್ನು ಪಡೆದಿದ್ದಾರೆ. ಇವರನ್ನು ಶಾಲಾ ಸಂಚಾಲಕರಾದ ಡಾ. ರೇಣುಕಾ ಪ್ರಸಾದ್ ಕೆ.ವಿ ಯವರು ಅಭಿನಂದಿಸಿ, ಶುಭ ಹಾರೈಸಿದರು ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ರವರು ಅಭಿನಂದಿಸಿ ಗೌರವಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಶಾಲಾ ಉಪ ಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ, ಶಿಕ್ಷಕರು, ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.