








ಯಾದವ ಸಭಾ ಪ್ರಾದೇಶಿಕ ಸಮಿತಿ ಬೆಳ್ಳಾರೆ ವತಿಯಿಂದ ಇತ್ತೀಚೆಗೆ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಠಾರದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆ, ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕು. ಅಶ್ರಿತಾ ಆರ್. ಅಂಕತಡ್ಕರನ್ನು ಸನ್ಮಾನಿಸಲಾಯಿತು. ದಿ. ರಾಮಾನಾಥ ಮಣಿಯಾಣಿ ಮತ್ತು ಅನಿತಾ ಅಂಕತಡ್ಕ ದಂಪತಿಗಳ ಪುತ್ರಿಯಾಗಿರುವ ಇವರು ಸುಳ್ಯದ ಕೆವಿಜಿ ಕಾನೂನು ಕಾಲೇಜಿನಲ್ಲಿ BALLB ಯಲ್ಲಿ A+ ಗ್ರೇಡ್ ನೊಂದಿಗೆ ಉತ್ತೀರ್ಣರಾಗಿರುತ್ತಾರೆ. ಇವರೊಂದಿಗೆ A ಗ್ರೇಡ್ ಫಲಿತಾಂಶದೊಂದಿಗೆ ಪದವಿ ಪಡೆದ ಅಂಜಲಿ ಪಡ್ಪು ಬೆಳ್ಳಾರೆಯವರನ್ನೂ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಾದವ ಸಭಾ ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾದ ಕ್ಯಾಪ್ಟನ್ ಸುದಾನಂದ ಮಣಿಯಾಣಿ ಪೆರುವಾಜೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಯಾದವ ಸಭಾ ಜಿಲ್ಲಾಧ್ಯಕ್ಷರು ಎ.ಕೆ ಮಣಿಯಾಣಿ ಬೆಳ್ಳಾರೆ, ತಾಲೂಕು ಅಧ್ಯಕ್ಷ ಕರುಣಾಕರ ಹಾಸ್ಪರೆ, ತಾಲೂಕು ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಜಯಕೃಷ್ಣ, ಯುವ ಮೋರ್ಚಾದ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಕಣೆಮರಡ್ಕ, ಪ್ರಾದೇಶಿಕ ಸಮಿತಿಯ ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಬಾಳಿಲ, ಕಾರ್ಯದರ್ಶಿ ಸಂತೋಷ ಬಾಯಂಬಾಡಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಚಂದ್ರಹಾಸ ಮಣಿಯಾಣಿ ಪಡ್ಪು, ಬೆಳ್ಳಾರೆ ನಿರೂಪಿಸಿದರು.










