ಗೋವಾ ಮ್ಯಾರಥಾನ್ ನಲ್ಲಿ ಜಸ್ಮಿತಾ ಕೊಡೆಂಕಿರಿಗೆ ದ್ವಿತೀಯ ಸ್ಥಾನ

0

ಡಿಸೆಂಬರ್ 14 ರಂದು ಗೋವಾದ ವಾಸ್ಕೋದಲ್ಲಿ ನಡೆದ ಗೋವಾ ಮ್ಯಾರಥಾನ್ ನಲ್ಲಿ ಜಸ್ಮಿತಾ ಕೊಡೆಂಕಿರಿಗೆ 42 ಕಿ.ಮೀ ವಿಭಾಗದಲ್ಲಿ ದ್ವಿತೀಯ ಸ್ಥಾನದೊಂದಿಗೆ 17,500/ನಗದು ಬಹುಮಾನ ಹಾಗೂ ಫಾಸ್ಟ್ ಆಫ್ ಕಂಪೆನಿಯ ಕಿಟ್ ದೊರಕಿದೆ. ಇದರಲ್ಲಿ 18 ದೇಶದಿಂದ 6,000 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು ರಷ್ಯಾ ದೇಶದ ಪೆಟ್ರಾ ವಾಸ್ಟೊರೊವಾ ಪ್ರಥಮ ಬಹುಮಾನ ಪಡೆದರೆ ಮಹಾರಾಷ್ಟ್ರ ದ ಶರ್ಮಿಳಾ ಕದಂ ತೃತೀಯ ಬಹುಮಾನ ಪಡೆದರು. ಇವರು ಬಳ್ಪ ಗ್ರಾಮದ ಕೊಡೆಂಕಿರಿ ವಾಚಣ್ಣ ಗೌಡ ಮತ್ತು ದಮಯಂತಿ ದಂಪತಿಗಳ ಪುತ್ರಿ.