ಪರ್ಯಾಯ ಸುಳ್ಯ -ಅಜ್ಜಾವರ- ನಾರ್ಕೋಡು ಸಂಪರ್ಕ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ














ಆಲೆಟ್ಟಿ- ಬಡ್ಡಡ್ಕ -ಕೂರ್ನಡ್ಕ ಹಾಗೂ ಆಂತರ್ ರಾಜ್ಯ ಸಂಪರ್ಕದ ರಸ್ತೆಯ ನಾಗಪಟ್ಟಣ ಸೇತುವೆಯು ಶಿಥಿಲಗೊಂಡ ಹಿನ್ನಲೆಯಲ್ಲಿ ಸೇತುವೆಯ ದುರಸ್ಥಿ ಕಾರ್ಯವು ಎ. 15 ರಂದು ಪ್ರಾರಂಭಗೊಳ್ಳಲಿದ್ದು
ಮೇ. 31 ರ ತನಕ ನಡೆಯಲಿದ್ದು ಈ ಸಮಯದಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗುವುದು.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದಡಿ ಉಲ್ಲೇಖ (1) ರಲ್ಲಿ ಅಧೀಕ್ಷಕ ಇಂಜಿನಿಯರ್
ಲೋಕೋಪಯೋಗಿ ಇಲಾಖೆ ಮಂಗಳೂರಿನಿಂದ ಅನುಮೋದನೆಗೊಂಡಿದ್ದು, ಇಲಾಖೆಯನಿಯಮಾನುಸಾರ ಟೆಂಡರ್ ಪ್ರಕ್ರಿಯೆ ಕರೆದು ಗುತ್ತಿಗೆ ನಿಗದಿಪಡಿಸಲಾಗಿದೆ. ಅದರಂತೆ ಸೇತುವೆಯು ಶಿಥಿಲಗೊಂಡಿದ್ದು ಸೇತುವೆಯ ಬೇರಿಂಗ್ ಎಕ್ಸ್ ಪೆನ್ಸನ್ ಜಾಯಿಂಟ್ ಗಳನ್ನು ಬದಲಿಸಿದುರಸ್ಥಿಪಡಿಸಬೇಕಾಗಿದ್ದು ಅನಿವಾರ್ಯವಾಗಿ ವಾಹನ ಸಂಚಾರ ಸಂಪೂರ್ಣವಾಗಿ ನಿಷೇಧಿಸಬೇಕಾಗುವುದು ಎಂದು ಇಲಾಖೆಯ ವತಿಯಿಂದ ಪ್ರಕಟಣೆ ಹೊರಡಿಸಿರುತ್ತಾರೆ.
ಸುಳ್ಯ ಲೋಕೋಪಯೋಗಿ ಇಲಾಖೆ ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರವರ ಕೋರಿಕೆಯಂತೆ ಎ. 15 ರಿಂದ 31 ರ ವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗುವುದು.
ಈ ಸಮಯದಲ್ಲಿ ಪರ್ಯಾಯವಾಗಿ ಸುಳ್ಯದಿಂದ ಆಲೆಟ್ಟಿ -ಬಡ್ಡಡ್ಕ -ಕೂರ್ನಡ್ಕ ಮತ್ತು ಆಲೆಟ್ಟಿ-ಕೋಲ್ಚಾರು-ಕಣಕ್ಕೂರು-ಬಂದಡ್ಕ ಹಾಗೂ ಕೇರಳ ಭಾಗಕ್ಕೆ ಸಂಚರಿಸುವ ವಾಹನಗಳು ಜಿಲ್ಲಾ ಮುಖ್ಯ ರಸ್ತೆಯಾಗಿರುವ ಸುಳ್ಯ -ಕಾಂತಮಂಗಲ- ಅಜ್ಜಾವರ -ಮಂಡೆಕೋಲು-ಕನ್ಯಾನ ಮಾರ್ಗವಾಗಿ ಅಜ್ಜಾವರ – ನಾರ್ಕೋಡು ಸಂಪರ್ಕದ ರಸ್ತೆ ಬಳಸುವಂತೆ ವರದಿಯಲ್ಲಿ ತಿಳಿಸಿರುತ್ತಾರೆ.







