ಆನಂದ ಮಡಿವಾಳ ಕಲ್ಲುಗುಂಡಿ ನಿಧನ

0

ಸಂಪಾಜೆ ಗ್ರಾಮದ ಕಲ್ಲುಗುಂಡಿ ನಿವಾಸಿ ಹಾಗೂ ಹಲವಾರು ವರ್ಷಗಳಿಂದ ದೈವದ ಸೇವೆ ಮಾಡುತ್ತಿದ್ದ ಆನಂದ ಮಡಿವಾಳ ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಜು.18 ರಂದು ನಿಧನರಾದರು.

ಅವರಿಗೆ 68 ವರ್ಷ ವಯಸ್ಸಾಗಿತ್ತು.

ಸುಮಾರು ವರ್ಷಗಳಿಂದ ಕಲ್ಲುಗುಂಡಿಯ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲ ಸೇರಿದಂತೆ ಹಲವಾರು ದೇವಸ್ಥಾನಗಳಲ್ಲಿ ದೈವದ ಚಾಕರಿ ಕೆಲಸವನ್ನು ಮಾಡುತ್ತಿದ್ದರು.

ಮೃತರು ಪತ್ನಿ ಪುಷ್ಪಲತಾ, ಮಕ್ಕಳಾದ ವಿನೋದ್, ವಿಜೇತ್ ,ಕಾರ್ತಿಕ್ , ವಿನೀತಾ, ಸಹೋದರಾದ ಚಿನ್ನಪ್ಪ , ಗೋಪಾಲ , ಗಣೇಶ್ ಹಾಗೂ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ.