ಸೆ. 28 : ಸ್ನೇಹ ಶಾಲೆಯಲ್ಲಿ ಖಾದಿಬಟ್ಟೆಯಲ್ಲಿ ಅರಳಿದ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳ ಪ್ರದರ್ಶನ

0

2026 ರ ಪ್ರೈಡ್ ಆಫ್ ಇಂಡಿಯಾ ಪ್ರಶಸ್ತಿ ಪುರಸ್ಕೃತ ಹರಿಹರದ ಚಿತ್ರಕಲಾ ಶಿಕ್ಷಕ ಜಿ. ಜೆ. ಮೆಹೆಂದಳೆಯವರ1322 ನೇ
ಪ್ರದರ್ಶನ

500 ಕ್ಕೂ ಮಿಕ್ಕಿದ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ಖಾದಿ ಬಟ್ಟೆಯಲ್ಲಿ ರಚಿಸಿರುವ ಮೆಹೆಂದಳೆಯವರು ನಾಡಿನ ವಿವಿಧ ಶಾಲೆಗಳಲ್ಲಿ ಹಾಗೂ ಸಾಂಸ್ಕೃತಿಕ ಸಮಾರಂಭಗಳಲ್ಲಿ ಚಿತ್ರ ಪ್ರದರ್ಶನಗಳನ್ನು ಏರ್ಪಡಿಸಿ ದೇಶ ಪ್ರೇಮದ ಪ್ರಜ್ಞೆಯನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಇದೇ ಸೆಪ್ಟೆಂಬರ್ 28 ರಂದು ಅಪರಾಹ್ನ 2 ರಿಂದ 4 ರ ವರೆಗೆ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಈ ಪ್ರದರ್ಶನವಿದೆ. ಸ್ವಾತಂತ್ರ್ಯ ಗಳಿಸಿ 75 ವರ್ಷಗಳನ್ನು ದಾಟಿರುವ ನಾವು ಮತ್ತೊಮ್ಮೆ ದೇಶದ ಹಿತಕ್ಕಾಗಿ ಜೀವ ಜೀವನವನ್ನೇ ಬಲಿದಾನ ಮಾಡಿದ ಹೆಮ್ಮೆಯ ವಿರಯೋಧರ ಚಿತ್ರಗಳನ್ನು ನೋಡಿ ಅವರ ತ್ಯಾಗವನ್ನು ಸ್ಮರಿಸೋಣವೆಂದು ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಹೇಳಿದ್ದಾರೆ. ಸುಳ್ಯದ ಆಸಕ್ತರು ಈ ಸಂದರ್ಭದ ಸದುಪಯೋಗ ಪಡೆಯಬೇಕಾಗಿ ಅವರು ಆಹ್ವಾನ ನೀಡಿದ್ದಾರೆ.