ಆಲೆಟ್ಟಿ ಮೊಸರು ಕುಡಿಕೆ ಉತ್ಸವದ ಲೆಕ್ಕ ಪತ್ರ ಮಂಡನಾ ಸಭೆ ಮತ್ತು ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ ಪಡೆದ ತಂಡಕ್ಕೆ ಅಭಿನಂದನೆ

0

ಆಲೆಟ್ಟಿಯ ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ, ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡ 4 ನೇ ವರ್ಷದ ಆಲೆಟ್ಟಿ ಮೊಸರು ಕುಡಿಕೆ ಉತ್ಸವದ ಲೆಕ್ಕ ಪತ್ರ ಮಂಡನಾ ಸಭೆ ಸೆ.26 ರಂದು ಆಲೆಟ್ಟಿ ಯಲ್ಲಿ ನಡೆಯಿತು.

ಕ್ಲಬ್ ಅಧ್ಯಕ್ಷ ಸತೀಶ್ ಕುಲಾಲ್ ಆಲೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸುಳ್ಯ ಯುವಜನ ಸಂಯುಕ್ತ ಮಂಡಳಿಯ ವತಿಯಿಂದ ಕೊಡಮಾಡಲ್ಪಡುವ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ ಭಾಜನರಾಗಿರುವ ತಂಡಕ್ಕೆ ಸಮಿತಿಯ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಆಲೆಟ್ಟಿ ಗ್ರಾಮದಿಂದ ನಿರ್ದೇಶಕ ರಾಗಿ ಆಯ್ಕೆಗೊಂಡ ಕ್ಲಬ್ ಸದಸ್ಯ ಸುನಿಲ್ ಗುಂಡ್ಯ ರವರನ್ನುಅಭಿನಂದಿಸಲಾಯಿತು.

ಉತ್ಸವದ ಅಯ ವ್ಯಯಗಳ ಕುರಿತು ಕೋಶಾಧಿಕಾರಿ ನಾಗರಾಜ್ ಬಡ್ಡಡ್ಕ ವಿವರ ಮಂಡಿಸಿದರು.
ವೇದಿಕೆಯಲ್ಲಿ ಕಾರ್ಯದರ್ಶಿ ಶ್ರೀನಾಥ್ ಆಲೆಟ್ಟಿ, ಕೋಶಾಧಿಕಾರಿ ದೀಪಕ್ ರಾಜ್ ಆಲೆಟ್ಟಿ, ಭಜನಾ ಸಂಘದ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಉಪಸ್ಥಿತರಿದ್ದರು.
ಕ್ಲಬ್ ಗೌರವಾಧ್ಯಕ್ಷ ಲತೀಶ್ ಗುಂಡ್ಯ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಸುರೇಶ್ ಆಲೆಟ್ಟಿ ವಂದಿಸಿದರು.
ಕ್ಲಬ್ ನ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು. ಎಲ್ಲರಿಗೂ ದೀಪಕ್ ರಾಜ್ ರವರ ಮನೆಯಲ್ಲಿ ಸಹಭೋಜನದ ವ್ಯವಸ್ಥೆ ಮಾಡಲಾಗಿತ್ತು.