ಅ.11-ಅ 20: ಪಂಜ ದೇಗುಲದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿದಿಯಲ್ಲಿ ನವರಾತ್ರಿ ಪೂಜೆ

0

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಸ್ಥಾನದ .
ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿದಿಯಲ್ಲಿ
ಅ.11 ರಿಂದ ಅ.20 ತನಕ ನವರಾತ್ರಿ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.ಪ್ರತಿದಿನ ಸಂಜೆ 6ರಿಂದ ರಾತ್ರಿ 8.30ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಭಜನೆ, ಕಲಾಸೇವೆ, ವಾಹನ ಪೂಜೆ ಸೇರಿದಂತೆ ವಿವಿಧ ಸೇವೆಗಳು ನಡೆಯಲಿದ್ದು, ಬಳಿಕ ಭಕ್ತರಿಗೆ ಅನ್ನಸಂಪರ್ಪಣೆ ನಡೆಯಲಿದೆ.
ನವರಾತ್ರಿ ಅವಧಿಯಲ್ಲಿ ನಡೆಯುವ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ವಿನಂತಿಸಿದ್ದಾರೆ.

ಅ. 11 ರಂದು ನಾಗತೀರ್ಥ ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ ,ಕು.ಸ್ತುತಿ ಆ‌ರ್. ಭಟ್ ಪ್ರಸ್ತುತಿ, ನೆಕ್ಕಿಲ ಮತ್ತು ಕು.ಮಹತಿ ಬಿ.ಚೆತ್ತಿಲ ಇವರಿಂದ ಭಕ್ತಿಗಾನ.
ಅ.12 ರಂದು ಅಳ್ಪೆ ಚಿಂಗಾಣಿಗುಡ್ಡೆ
ಶ್ರೀ ವಿಷ್ಣು ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ,ಮಾಸ್ಟರ್ ಪ್ರಕುಲ್ ತೋಟ ಇವರಿಂದ ತಬಲ ಮತ್ತು ಕೀಬೋರ್ಡ್ ವಾದನ.

ಅ.13 ರಂದು ಪಂಬೆತ್ತಾಡಿ
ಪಂಚಶ್ರೀ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ,ಕು.ಅದಿತಿ ಲಕ್ಷ್ಮಿ ನಾಯರ್‌ಕೆರೆ ಮತ್ತು ಕು.ವರ್ಷ ನೆಲ್ಲಿಗದ್ದೆ ಭೈರವಿ ನಾಟ್ಯಾಲಯ ಐವರ್ನಾಡು ಇವರಿಂದ ಭರತನಾಟ್ಯ.

ಅ.14 ರಂದು ಬೀದಿಗುಡ್ಡೆ ಸಂಪ್ಯಾಡಿ ಶ್ರೀ ಸಿದ್ದಿವಿನಾಯಕ ಭಜನಾ ಮಂಡಳಿಯಿಂದ
ಭಜನಾ ಸಂಕೀರ್ತನೆ,ಕುಟುಂಬ . ಸ್ತುತಿ ರೈ ಐಗಿರಿ ಅಡ್ಡಬೈಲು ( ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ ರೈ ಮತ್ತು ವಿದುಷಿ ಸ್ವಸ್ತಿಕ ಆರ್ ಶೆಟ್ಟಿ ಇವರ ಶಿಷ್ಯೆ ), ಮತ್ತು ಕು.ಚರೀಷ್ಮ ರೈ ಪಲ್ಲೋಡಿ (ವಿದುಷಿ ಪ್ರಾಂಜಲಿ ಕಾನತ್ತೂರು ಇವರ ಶಿಷ್ಯೆ )ಇವರಿಂದ ‘ಭರತ ನಾಟ್ಯ”.

ಅ.15 ರಂದು ಪಂಜ ವಲಯ ಹವ್ಯಕ ಮಹಿಳೆಯರಿಂದ ಭಜನಾ ಸಂಕೀರ್ತನೆ,ವಿಶ್ವ ಕಲಾನಿಕೇತನ ಇನ್ಸಿಟ್ಯೂಟ್ ಆಫ್ ಆರ್ಟ್ ಅಂಡ್ ಕಲ್ಚರ್ (ರಿ) ಪುತ್ತೂರು ಇಲ್ಲಿಯ ವಿದ್ಯಾರ್ಥಿಗಳಾದ ಕು.ಆರಾಧನಾ ಬಾಬ್ಲುಬೆಟ್ಟು ಹಾಗೂ ಕು. ಪ್ರಣತಿ ಜೋಗಿಬೆಟ್ಟು ಇವರಿಂದ “ಭರತನಾಟ್ಯ”. (ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ ರೈ ಹಾಗೂ ವಿದುಷಿ, ಸ್ವಸ್ತಿಕ ಆರ್ ಶೆಟ್ಟ ಇವರ ಶಿಷ್ಠೆಯರು.

ಅ.16 ರಂದು ಪಂಜ ವನಿತಾ ಸಮಾಜ ರವರಿಂದ ಭಜನ ಸಂಕೀರ್ತನೆ, ಶ್ರೀ ಶಾರದಾಂಬಾ ಮಕ್ಕಳ ಕುಣಿತ ಭಜನಾ ತಂಡ ನಾಗತೀರ್ಥ ಇವರಿಂದ ಕುಣಿತ ಭಜನೆ.
ಅ.17 ರಂದು ಶಿವಳ್ಳಿ ಸಂಪದ ಪಂಜ ವಲಯ ರವರಿಂದ ಭಜನಾ ಸಂಕೀರ್ತನೆ. ಮಾಸ್ಟರ್ ತನ್ಮಯ್ ಕಿನ್ನಿಕುಮ್ರಿ ಇವರಿಂದ ಭರತನಾಟ್ಯ” (ಕರ್ನಾಟಕ ಕಲಾಶ್ರೀ ವಿದುಷಿ ನಯನ,ವಿ ರೈ ಹಾಗೂ ವಿದುಷಿ ಸ್ವಸ್ತಿಕ ಆರ್ ಶೆಟ್ಟಿ ಇವರ ಶಿಷ್ಯ).

ಅ.18 ರಂದು ಶ್ರೀ ಶಾರದಾಂಬಾ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ,ಶ್ರೀ ಶಾರದಾಂಬಾ ಯಕ್ಷಗಾನ ಅಧ್ಯಯನ ಕೇಂದ್ರ,ಕಲಾಕ್ಷೇತ್ರ ಪಂಜ ಇವರಿಂದ ನಾಟ್ಯ ವೈಭವ.

ಅ.19 ರಂದು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕೇನ್ಯ ಭಜನಾ ಸಂಕೀರ್ತನೆ.ಶ್ರೀಮತಿ ಗೀತ ಸುಧಾ ತೋಟ ಇವರಿಂದ ‘ಭಕ್ತಿ ಗಾಯನ”.

ಅ.20 ಕಲ್ಮಡ್ಕ ಯುವ ಸ್ಫೂರ್ತಿ ಸೇವಾ ಸಂಘದ ವತಿಯಿಂದ ಭಜನಾ ಸಂಕೀರ್ತನೆ. ಕು.ಹೇಮಸ್ವಾತಿ ಕುರಿಯಾಜೆ ಮತ್ತು ಕು.ದೇವಿಕ ಕುರಿಯಾಜೆ ಇವರಿಂದ ‘ಭರತನಾಟ್ಯ’.ನಡೆಯಲಿದೆ.ಪ್ರತಿದಿನ ಸಂಜೆ ಶ್ರೀ ಪಂಚಲಿಂಗೇಶ್ವರ ಮಕ್ಕಳ ಭಜನಾ ತಂಡದಿಂದ ಭಜನ ಸಂಕೀರ್ತನೆ ನಡೆಯಲಿದೆ.

ನವರಾತ್ರಿ ಪ್ರಯುಕ್ತ ಕುಂಕುಮಾರ್ಚನೆ,ಹೂವಿನ ಪೂಜೆ,ದುರ್ಗಾ ಪೂಜೆ
ವಾಹನ ಪೂಜೆ,ನವರಾತ್ರಿ ಪೂಜೆ,
ಒಂದು ದಿನದ ನವರಾತ್ರಿ ಪೂಜೆ ಮತ್ತು ಅನ್ನದಾನ ಸೇವೆಗಳು ವಿಶೇಷವಾಗಿ ನಡೆಯಲಿದೆ.
ಅ. 20 ರಂದು ಆಯುಧಪೂಜೆ ದಿವಸ ವಾಹನ ಪೂಜೆ ಪೂ.8ರಿಂದ ಅ. 2.ತನಕ ಹಾಗೂ ಸಂ 5 ರಿಂದ 9.30ರವರೆಗೆ ನಿರಂತರ ನಡೆಯಲಿದೆ. ಉಳಿದ ದಿನಗಳಲ್ಲಿ ಬೆಳಗ್ಗಿನ, ಮಧ್ಯಾಹ್ನ, ರಾತ್ರಿ ಪೂಜೆ ನಂತರ ನಡೆಯಲಿದೆ