ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸರಸ್ ಮೇಳ–2026ರಲ್ಲಿ ಸುಳ್ಯ ತಾಲೂಕಿನಿಂದ ಎರಡು ಮಳಿಗೆಗಳ ಭಾಗಿ

0

ಬೆಂಗಳೂರಿನ ಜಯಮಹಲ್ ಪ್ಯಾಲೇಸ್‌ನಲ್ಲಿ ಸೆಪ್ಟೆಂಬರ್ 19ರಿಂದ 27ರವರೆಗೆ ನಡೆದ “ನಮ್ಮ ಸರಸ್ ಮೇಳ–2026” ರಾಷ್ಟ್ರೀಯ ಮೇಳದಲ್ಲಿ ಸುಳ್ಯ ತಾಲೂಕಿನಿಂದ ಎರಡು ಮಳಿಗೆಗಳು ಭಾಗವಹಿಸಿತ್ತು.

ಜಾಲ್ಸೂರಿನ ಜೌರಾಬಿ ಅವರು ಲೈವ್ ಫುಡ್ ವಿಭಾಗದಲ್ಲಿ ಭಾಗವಹಿಸಿ ಸ್ಥಳದಲ್ಲೇ ಸಮೋಸಾ ತಯಾರಿಸಿ ಮಾರಾಟ ಮಾಡಿದರು. ಜೊತೆಗೆ VDVK ವತಿಯಿಂದ ತಾರಾ ಮತ್ತು ಅನಿತಾ ಅವರು ಮಳಿಗೆಯೊಂದರಲ್ಲಿ ಭಾಗವಹಿಸಿ ವಿವಿಧ ಉತ್ಪನ್ನಗಳು ಹಾಗೂ ಸ್ವ-ಸಹಾಯ ಸಂಘದ ಚಟುವಟಿಕೆಗಳನ್ನು ಪ್ರದರ್ಶಿಸಿ ಮಾರಾಟ ಮಾಡಿದರು.

ಗ್ರಾಮೀಣಾಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ನಡೆದ ಈ ಮೇಳವು ಮಹಿಳಾ ಸ್ವ-ಸಹಾಯ ಸಂಘಗಳ ಉತ್ಪನ್ನಗಳು, ಸಾಂಪ್ರದಾಯಿಕ ಕಲೆ-ಕೌಶಲ್ಯಗಳು, ಆಹಾರ ಪದಾರ್ಥಗಳು ಹಾಗೂ ಗ್ರಾಮೀಣ ಉದ್ಯಮಶೀಲತೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಉದ್ದೇಶ ಹೊಂದಿದೆ.