ಡಾ.ಪುನೀತ್ ರಾಘವೇಂದ್ರ ಕುಂಟುಕಾಡುರವರ ಡಾ.ಪಿಆರ್ಸ್ ಲೈಫ್ ಸ್ಟೈಲ್ ಕ್ಲಿನಿಕ್ ಮಂಗಳೂರಿನಲ್ಲಿ ಶುಭಾರಂಭ

0

ಮಂಗಳೂರು ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾಗಿರುವ ಡಾ.ಪುನೀತ್ ರಾಘವೇಂದ್ರ ಕುಂಟುಕಾಡುರವರ ವಿನೂತನ ಜೀವನಶೈಲಿ ಕ್ಲಿನಿಕ್ Dr.PR’s Lifestyle Clinic (Where lifestyle meets healing) ಮಂಗಳೂರಿನ ಪಂಪವೆಲ್ ವೃತ್ತದ ಸಮೀಪ, ವಿಶ್ವಾಸ್ ಹೈಟ್ಸ್ ಬಿಲ್ಡಿಂಗ್‌ನಲ್ಲಿ ಅ.4 ರಂದು ಶುಭಾರಂಭಗೊಂಡಿದೆ. ಮಂಗಳೂರಿನ ಹಿರಿಯ ವೈದ್ಯರು, ಯೆನೆಪೋಯ ಮೆಡಿಕಲ್ ಕಾಲೇಜಿನ ವಯೋಸಹಜ ಸಮಸ್ಯೆಗಳ ವಿಭಾಗದ ಪ್ರೊಫೆಸರ್ ಡಾ. ಪ್ರಭಾ ಅಧಿಕಾರಿಯವರು ಉದ್ಘಾಟನೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಲಕ್ಷ್ಮೀ ಟೀಚರ್ ಕುಂಟುಕಾಡು, ಶ್ರೀಮತಿ ಪುಷ್ಪಿತಾ ಬಿ.ಕೆ, ಡಾ. ಸೌಮ್ಯ ಮಹೇಶ್, ಡಾ. ಶಿಲ್ಪಿ, ಡಾ. ವಿಜಯೇಂದ್ರ ಇಟಗಿ, ಡಾ. ಅಜಿತ್ ಕೆ. , ಡಾ. ಅರ್ಪಿತ್ ಕುಮಾರ್, ದರ್ಶನ್ ಪಳಂಗಾಯ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

ಕ್ಲಿನಿಕ್ ಸೋಮವಾರದಿಂದ ಶನಿವಾರದವರೆಗೆ ಸಂಜೆ 5.ರಿಂದ 8ರವಗೆ ಕಾರ್ಯನಿರ್ವಹಿಸುತ್ತದೆ. ಕ್ಲಿನಿಕ್ ನಲ್ಲಿ ಯಾವುದೇ ಸಮಸ್ಯೆಗಳಿಗೆ ಸೂಕ್ತ ಜೀವನ ಶೈಲಿ ತಿಳಿಸಿಕೊಡುವ ಸಮಾಲೋಚನೆಯೊಂದಿಗೆ ಯೋಗ ಚಿಕಿತ್ಸೆ, ಡಯಟ್ ಪ್ಲಾನ್, ಸೂಜಿ ಚಿಕಿತ್ಸೆ ( ಆಕ್ಯುಪಂಚರ್), ಒತ್ತಡ ಚಿಕಿತ್ಸೆ ( ಆಕ್ಯುಪ್ರೆಶರ್), ಮಾನಸಿಕ ಒತ್ತಡ ನಿರ್ವಹಣೆಗೆ ಅರೋಮ ಚಿಕಿತ್ಸೆ ಮುಂತಾದ ಸೌಲಭ್ಯ ದೊರೆಯಲಿದೆ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞ ವೈದ್ಯರಾದ ಡಾ.‌ ಪುನೀತ್ ರಾಘವೇಂದ್ರ ಕುಂಟುಕಾಡು, ಡಾ. ಅಜಿತ್ , ಆಹಾರ ತಜ್ಞರು ಲಭ್ಯರಿರುತ್ತಾರೆ. ಹೆಚ್ಚಿನ ಮಾಹಿತಿಗೆ 8951061986 ಇಲ್ಲಿ ಸಂಪರ್ಕಿಸಬಹುದು.