ಅಜ್ಜಾವರ ವರಮಹಾಲಕ್ಷ್ಮೀ ಪೂಜಾ ಸಮಿತಿ ಮಹಾಸಭೆ

0

ಅಧ್ಯಕ್ಷರಾಗಿ ಶ್ವೇತಾ ಶಿರಾಜೆ ಆಯ್ಕೆ

ಅಜ್ಜಾವರ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಇದರ ವಾರ್ಷಿಕ ಮಹಾಸಭೆಯು ಅ. ೪ರಂದು ಅಜ್ಜಾವರದ ಶಂಕರ ಭಾರತೀ ವೇದ ಪಾಠಶಾಲೆ ಬಯಂಬು ಇಲ್ಲಿ ನಡೆಯಿತು.

ಸಮಿತಿಯ ಅಧ್ಯಕ್ಷರಾದ ಕು. ಲಕ್ಷ್ಮೀ ಪಲ್ಲತ್ತಡ್ಕ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ವಿಮಲಾರುಣ ಪಡ್ಡಂಬೈಲು ವರದಿ ವಾಚಿಸಿದರು. ಕೋಶಾಧಿಕಾರಿ ಮೋಹಿನಿ ಜಯರಾಮ ಬಾಳಿಲ ಅಜ್ಜಾವರ ಲೆಕ್ಕಪತ್ರ ಮಂಡಿಸಿದರು.
ಬಳಿಕ ೨೦೨೬-೨೭ ನೇ ಸಾಲಿನ ನೂತನ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಶ್ವೇತಾ ಪುರುಷೋತ್ತಮ ಶಿರಾಜೆ, ಉಪಾಧ್ಯಕ್ಷರಾಗಿ ಪುಟ್ಟಮ್ಮ ನಾಂಗುಳಿ, ಕಾರ್ಯದರ್ಶಿಯಾಗಿ ವಿಶಾಲ ಸೀತಾರಾಮ ಕರ್ಲಪ್ಪಾಡಿ, ಕೋಶಾಧಿಕಾರಿಯಾಗಿ ಕವಿತಾ ಪುರುಷೋತ್ತಮ ನಾರ್ಕೋಡು ಕರ್ಲಪ್ಪಾಡಿ, ಜತೆ ಕಾರ್ಯದರ್ಶಿ ಮೋಹಿನಿ ನಾರಾಯಣ ಅಜ್ಜಾವರ, ಭಜನಾ ಸಂಚಾಲಕರಾಗಿ ಜಯಶ್ರೀ ನಾಗೇಶ್ ಬೇಲ್ಯ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಹಿಷಮರ್ದಿನಿ ದೇವಳದ ಆಡಳಿತ ಮೊಕ್ತೇಸರರಾದ ಬಯಂಬು ಭಾಸ್ಕರ ರಾವ್, ಗೌರವಾಧ್ಯಕ್ಷರಾದ ಕರುಣಾಕರ ಅಡ್ಪಂಗಾಯ, ಸಲಹಾ ಸಮಿತಿ ಸದಸ್ಯರಾದ ಸೀತಾರಾಮ ಶಾಂತಿಮಜಲು, ಬಾಲಚಂದ್ರ ಮುಡೂರು, ಅರುಣ ಪಡ್ಡಂಬೈಲು, ಸೀತಾರಾಮ ಕರ್ಲಪ್ಪಾಡಿ, ರಾಜೇಶ್ ಮೇನಾಲ, ಸುಬೋಧ್ ಶೆಟ್ಟಿ ಮೇನಾಲ, ನಾರಾಯಣ ಬಂಟ್ರಬೈಲು, ಸ್ಥಾಪಕಾಧ್ಯಕ್ಷರಾದ ಜಯಂತಿ ಜನಾರ್ದನ ಅಡ್ಪಂಗಾಯ ಮೊದಲಾದವರು ಉಪಸ್ಥಿತರಿದ್ದರು.