ಕುಕ್ಕುಜಡ್ಕ: ಅಗಲಿದ ರಾಘವೇಂದ್ರಪುಳಿಮಾರಡ್ಕ ರವರಿಗೆ ಚೊಕ್ಕಾಡಿ ಸೊಸೈಟಿಯಲ್ಲಿ ಶ್ರದ್ಧಾಂಜಲಿ ಸಭೆ

0

ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರು, ಪ್ರಸ್ತುತ ನಿರ್ದೇಶಕರಾಗಿದ್ದ ರಾಘವೇಂದ್ರ ಪುಳಿಮಾರಡ್ಕ ರವರು ಇತ್ತೀಚೆಗೆ ಅಗಲಿದ್ದು ಮೃತರಿಗೆ ಶ್ರದ್ಧಾಂಜಲಿ ಸಭೆಯನ್ನು ಕುಕ್ಕುಜಡ್ಕದಲ್ಲಿರುವ ಸಂಘದ ಕೇಂದ್ರ ಕಚೇರಿಯಲ್ಲಿ ಅ.6 ರಂದು ಹಮ್ಮಿಕೊಳ್ಳಲಾಯಿತು.

ಸಂಘದ ಅಧ್ಯಕ್ಷರಾದ ಕೇಶವ ಕರ್ಮಾಜೆಯವರು ಮೃತರ ಕುರಿತು ಗುಣಗಾನ ಮಾಡುವ ಮೂಲಕ ನುಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಪ್ರವೀಣ್ ಎಸ್.ರಾವ್, ನಿರ್ದೇಶಕರಾದ ಅರುಣ್ ನಾಯರ್ ಕಲ್ಲು, ಉಮೇಶ ಚಿಲ್ಪಾರು, ರಾಧಾಕೃಷ್ಣ ಬೊಳ್ಳೂರು, ನಿರಂಜನ ಕಾನಡ್ಕ, ಕುಮಾರ ಬೆಳ್ಚಪ್ಪಾಡ, ರಘುರಾಮ, ಶ್ರೀಮತಿ ಲತೇಶ್ವರಿ ಮಾಯ್ಪಡ್ಜ, ಕೃಷ್ಣ ನಾಯ್ಕ್ ಎ, ಶ್ರೀಮತಿ ವೀಣಾ ಎಂ.ಡಿ, ಅರುಣ್ ಕುಮಾರ್ ಪರ್ಮಲೆ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೋಹನ್ ಕುಮಾರ್ ಪಿ, ಸಿಬ್ಬಂದಿಗಳಾದ ದುಗ್ಗಪ್ಪ ಗೌಡ, ಪ್ರಸಾದ್ ಕೆ, ನಳಿನಾಕ್ಷಿ, ರಾಮಕೃಷ್ಣ, ಅಕ್ಷಿತ್ ಕುಮಾರ್, ಚೈತ್ರ, ಅಜಯ್ ಎಂ.ಆರ್, ಹರೀಶ್, ಸೋಮಶೇಖರ, ದಿನಗೂಲಿ ನೌಕರರಾದ ವಿಜೇತ್, ಕುಸುಮಾಧರ, ಶ್ರೀಮತಿ ರೇಖಾ, ಪಿಗ್ಮಿ ಸಂಗ್ರಾಹಕರಾದ ವೆಂಕಟ್ರಮಣ ಮತ್ತಿತರರು ಉಪಸ್ಥಿತರಿದ್ದು
ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.