ಸುಳ್ಯ ಯುವಜನ ಸಂಯುಕ್ತ ಮಂಡಳಿಯ ‘ಸಿಂಹಾವಲೋಕನ’ ಸ್ಮರಣ ಸಂಚಿಕೆ ಬಿಡುಗಡೆ

0


ಸುಳ್ಯ ಯುವಜನ ಸಂಯುಕ್ತ ಮಂಡಳಿ ವತಿಯಿಂದ ಹೊರತರಲಾದ ಸಿಂಹಾವಲೋಕನ ಸ್ಮರಣ ಸಂಚಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಮಾಡಲಾಗಿದ್ದು ಅದರ ಲೋಕಾರ್ಪಣೆಯನ್ನು ಅ.೧೧ರಂದು ಸುಳ್ಯದ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನಡೆದ ಸಂಕಲ್ಪ ಮಕ್ಕಳ ಹಬ್ಬ ಕಾರ್ಯಕ್ರಮದ ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು.
ಸುದ್ದಿ ಬಿಡುಗಡೆ ಸಂಪಾದಕರಾದ ಹರೀಶ್ ಬಂಟ್ವಾಳ್ ರವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಪವನ್ ಪಲ್ಲತ್ತಡ್ಕ ನೇತೃತ್ವದ ತಂಡ ಒಂದು ವರ್ಷದಲ್ಲಿ ೧೧೯ ಕಾರ್ಯಕ್ರಮ ಸಂಘಟನೆ ಮಾಡಿರುವ ಕುರಿತು ಅವರು ಶ್ಲಾಘನೆ ವ್ಯಕ್ತಪಡಿಸಿದರು. ಮಂಡಳಿಯ ನಿಕಟಪೂರ್ವಾಧ್ಯಕ್ಷ ಪವನ್ ಪಲ್ಲತ್ತಡ್ಕ ‘ಸುದ್ದಿ ಬಿಡುಗಡೆ ಸಹಕಾರದ ಕುರಿತು ಉಲ್ಲೇಖಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಣವ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಜಿ.ಆರ್.ಪ್ರಸಾದ್, ಮಂಡಳಿ ಕಾರ್ಯದರ್ಶಿ, ಸ್ಮರಣ ಸಂಚಿಕೆ ಸಂಪಾದಕ ವಿಜೇಶ್ ಹಿರಿಯಡ್ಕ, ಕೋಶಾಧಿಕಾರಿ ವಿನಯ ಬೆದ್ರುಪಣೆ, ನಿರ್ದೇಶಕರುಗಳಾದ ಮುರಳಿ ನಳಿಯಾರು, ಲೋಹಿತ್ ಬಾಳಿಕಳ, ಜನಾರ್ದನ ನಾಗತೀರ್ಥ, ರಂಗಮಯೂರಿ ನಿರ್ದೇಶಕ ಲೋಕೇಶ್ ಊರುಬೈಲು ಮೊದಲಾದವರಿದ್ದರು