ಅಜ್ಜಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನ ಇದರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷತ್ – ಭಜರಂಗದಳ, ಮಾತೃಶಕ್ತಿ – ದುರ್ಗಾವಾಹಿನಿ ವತಿಯಿಂದ ಮಾತೃ ಸಂಗಮ ಕಾರ್ಯಕ್ರಮ ಅ.೧೧ರಂದು ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.














ಮಧ್ಯಾಹ್ನ ಮಾತೃ ಸಂಗಮ ಸಮಾರೋಪದಲ್ಲಿ ಪುಣೆ ಮಹಿಳಾ ಮತ್ತು ಶಿಶು ಕಲ್ಯಾಣ ಗ್ರಾವಿತ ಫೌಂಡೇಶನ್ ಪುಣೆ ಇಲ್ಲಿಯ ಪ್ರಮುಖರಾದ ಶ್ರೀಮತಿ ವಾಣಿ ರೈ ಬೇಲ್ಯ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಪೂರ್ವಾಧ್ಯಕ್ಷರಾದ ಡಾ| ಕಲ್ಲಡ್ಕ ಪ್ರಭಾಕರ ಭಟ್ ಉಪನ್ಯಾಸ ನೀಡಿದರು.
ಉದ್ಘಾಟನೆ :
ಬೆಳಗ್ಗೆ ಮಾತೃಸಂಗಮ ಕಾರ್ಯಕ್ರಮವನ್ನು ಅಜ್ಜಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಿವರಾವ್ ಬಯಂಬು ಉದ್ಘಾಟಿಸಿದರು.
ವಿಶ್ವಹಿಂದೂ ಪರಿಷತ್ ಸುಳ್ಯ ಪ್ರಖಂಡ ಅಧ್ಯಕ್ಷ ಶ್ರೀಕಾಂತ್ ಗೋಳ್ವಲ್ಕರ್ ಅಧ್ಯಕ್ಷತೆ ವಹಿಸಿದ್ದರು. ಬಳಿಕ ೞರಾಷ್ಟ್ರೀಯತೆೞ ಕುರಿತು ಮುಳ್ಳೇರಿಯಾ ಯೋಗಾಚಾರ್ಯರಾದ ಪುಂಡರೀಕಾಕ್ಷ ಮಾತನಾಡಿದರು. ಅಜ್ಜಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಭಾಸ್ಕರ ರಾವ್ ಬಯಂಬು ಉಪಸ್ಥಿತರಿದ್ದರು. ಬಳಿಕ ೞಹಿಂದೂ ಮನೆೞ ವಿಷಯದಲ್ಲಿ ರಾಷ್ಟ್ರ ಸೇವಿಕಾ ಸಮಿತಿ ಜಿಲ್ಲಾ ಸೇವಾ ಪ್ರಮುಖ್ ಶ್ರೀಮತಿ ಶ್ರೀದೇವಿ ನಾಗರಾಜ್ ಭಟ್ ಮಾತನಾಡಿದರು.
ಸುಳ್ಯ ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕಿ ಶ್ರೀಮತಿ ಲೇಖಾ ವಿಕ್ರಂ ಉಪಸ್ಥಿತರಿದ್ದರು. ಆಶಿಕ್ ಮುಳ್ಯ ವೈಯಕ್ತಿಕ ಗೀತೆ ಹಾಡಿದರು.
ಸುಬೋಧ್ ಶೆಟ್ಟಿ ಮೇನಾಲ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ರಾಜೇಶ್ ಶೆಟ್ಟಿ ಮೇನಾಲ ಕಾರ್ಯಕ್ರಮ ನಿರ್ವಹಿಸಿದರು.
ನವರಾತ್ರಿ ಉತ್ಸವ
ಅಜ್ಜಾವರ ಶ್ರೀ ಮಹಿಷಮರ್ದಿನೀ ದೇವಳದಲ್ಲಿ ನವರಾತ್ರಿ ಉತ್ಸವ ಅ.೧೧ರಿಂದ ಆರಂಭಗೊಂಡು ಅ.೧೯ರವರೆಗೆ ಸಂಜೆ ಗಂಟೆ ೭ಕ್ಕೆ ಭಜನಾ ಕಾರ್ಯಕ್ರಮ ನಡೆಯುವುದು.
ಅ.೨೦ರಂದು ಆಯುಧಪೂಜೆ (ವಾಹನಪೂಜೆ) ಮಧ್ಯಾಹ್ನ ಶ್ರೀ ದೇವಿಯ ಪ್ರಸಾದ ಸೀರೆಗಳ ಏಲಂ, ಮಧ್ಯಾಹ್ನ ಗಂಟೆ ೧ ರಿಂದ ಅನ್ನಸಂತರ್ಪಣೆ, ಸಂಜೆ ಗಂಟೆ ೬-೩೦ರಿಂದ ಯಕ್ಷಗಾನ ತಾಳಮದ್ದಳೆ ಱವಾಲಿವಧೆೞ ನಡೆಯಲಿದೆ. ರಾತ್ರಿ ಶ್ರೀದೇವಿಗೆ ಸಾಮೂಹಿಕ ದುರ್ಗಾಪೂಜೆ ಮತ್ತು ಕಾರ್ತಿಕ ಪೂಜೆ ನಡೆಯಲಿದೆ.
ಪೋಲೀಸರನ್ನು ಕಂಡು ಕಲ್ಲಡ್ಕ ಗರಂ
ಕಲ್ಲಡ್ಕ ಪ್ರಭಾಕರ ಭಟ್‌ರವರು ಭಾಷಣ ಆರಂಭಿಸಿದಾಗ ಅಲ್ಲಿ ಪೋಲೀಸರು ಇರುವುದನ್ನು ಕಂಡು ಗರಂ ಆದರು. ೞಱನೀವು ಏನು ಇಲ್ಲಿ ಬಂದದ್ದು ? ನಿಮ್ಮನ್ನು ಒಳಗೆ ಬಿಟ್ಟದ್ದು ಯಾರು ? ಇವರು ಮಸೀದಿಗೆ ಅಥವಾ ಚರ್ಚಿಗೆ ಹೋಗುವ ಧೈರ್ಯ ತೋರಿಸ್ತಾರ? ನೀವು ಭಾಷಣ ರೆಕಾರ್ಡ್ ಮಾಡಿ ನನ್ನ ಮೇಲೆ ಕೇಸು ಮಾಡ್ಲಿಕ್ಕೆ ಬಂದದ್ದಾ ? ಹಿಂದೂ ಧರ್ಮವನ್ನು ಯಾರು ಬೇಕಾದರೂ ಆಕ್ರಮಣ ಮಾಡಬಹುದೆಂಬುದಕ್ಕೆ ಇದೂ ಒಂದು ಉದಾಹರಣೆೞೞ ಎಂದು ಅವರು ಹೇಳಿದಾಗ ಅಲ್ಲಿಗೆ ಬಂದಿದ್ದ ಪೋಲೀಸ್ ಹೊರಗಡೆ ಹೋಗಿ ನಿಂತುಕೊಂಡರು.
ಱಱಜಗತ್ತಿನ ವಿಸ್ಮಯ ತಾಯಿ. ಜೀವಮಾನದ ಪ್ರಾರಂಭದ ಎಲ್ಲ ಹಂತದಲ್ಲಿ ನಮಗೆ ಶಕ್ತಿ ಕೊಡುವವಳು. ಈ ರೀತಿಯ ಮಾತೃ ಸಂಗಮ ಕಾರ್ಯಕ್ರಮಕ್ಕೆ ತಾಯಂದಿರು ಬಂದಿದ್ದೀರಿ. ತಾವು ಮಕ್ಕಳನ್ನು ಕೂಡಾ ಬರುವಂತೆ ಮಾಡಬೇಕು. ಪ್ರತೀ ದಿನ ಮನೆಯಲ್ಲಿ ದೇವರ ಶ್ಲೋಕವನ್ನು ತಾಯಂದಿರು ಪಠಿಸುವ ಜತೆಗೆ ಮಕ್ಕಳು ಕೂಡಾ ಓದುವಂತೆ ಮಾಡಬೇಕು. ಸಮಾಜದಲ್ಲಿ ಪರಿವರ್ತನೆ ತರಬಲ್ಲ ಶಕ್ತಿ ಇರುವುದು ಹೆಣ್ಣಿಗೆ ಮಾತ್ರೞೞ – ಡಾ| ಪ್ರಭಾಕರ ಭಟ್ ಕಲ್ಲಡ್ಕ







