ಹೋಟೆಲ್ ಶ್ರೀ ಲಕ್ಷ್ಮೀ ಶುಭಾರಂಭ

0

ಸುಳ್ಯದ ಜೂನಿಯರ್ ಕಾಲೇಜ್ ರಸ್ತೆಯಲ್ಲಿರುವ ಲ್ಯಾಂಪ್ಸ್ ಸೊಸೈಟಿಯ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಧನುಷ್ ಕುಲಾಲ್ ಆಲೆಟ್ಟಿ ಯವರ ಮಾಲಕತ್ವದ ಹೋಟೆಲ್ ಶ್ರೀ ಲಕ್ಷ್ಮೀ ಅ.16 ರಂದು ಶುಭಾರಂಭಗೊಂಡಿದೆ.
ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವಾಗಿ ನೂತನ ಹೋಟೆಲ್‌ ಶುಭಾರಂಭ ಗೊಂಡಿತು. ಈ ಸಂದರ್ಭದಲ್ಲಿ ಮಾಲಕರ ತಂದೆ ರಮೇಶ್ ಕುಲಾಲ್ ಆಲೆಟ್ಟಿ,ತಾಯಿ ಶ್ರೀಮತಿ ಬೇಬಿ, ಬಂಧು ಸತೀಶ್ ಕುಲಾಲ್ ಆಲೆಟ್ಟಿ, ಸಂಜೀವ ಕುಲಾಲ್ ಆಲೆಟ್ಟಿ, ಮಾಧವ ಕುಲಾಲ್ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಹೋಟೆಲ್ ನಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ಬಾಳೆ ಎಲೆಯ ಊಟ ಮತ್ತು ಗಂಜಿ ಚಟ್ನಿ ಮತ್ತು ಚಾ,ಕಾಫಿ ತಿಂಡಿ ತಿನಿಸುಗಳು ‌ಲಭ್ಯವಿದೆ. ಅಲ್ಲದೆ ಪಾರ್ಸೆಲ್ ವ್ಯವಸ್ಥೆ ಇರುವುದಾಗಿ ಮಾಲಕರು ತಿಳಿಸಿದರು.