ಸುಬ್ರಹ್ಮಣ್ಯ  : ಮನೆ ಮೇಲೆ ಬರೆ ಜರಿದು ಮಕ್ಕಳು ಮೃತಪಟ್ಟ ಕುಟುಂಬಕ್ಕೆ ಸರಕಾರದಿಂದ ರೂ. 11 ಲಕ್ಷ ಪರಿಹಾರ

0

ಸಚಿವ ಎಸ್.ಅಂಗಾರರಿಂದ ಹಸ್ತಾಂತರ

ಆ. 1ರಂದು ಸುಬ್ರಹ್ಮಣ್ಯದಲ್ಲಿ ನಡೆದ ದುರ್ಘಟನೆಗೆ ಸಂಬಂಧಿಸಿದಂತೆ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ರೂ. 11 ಲಕ್ಷ 5 ಸಾವಿರ ಮೊತ್ತದ ಒಟ್ಟು 3 ಚೆಕ್ ನ್ನು ಸಚಿವ ಎಸ್. ಅಂಗಾರ ಆ. 2 ರಂದು ಕುಸುಮಾಧರಿಗೆ ಕುಸುಮಾಧರರ ತಂದೆ ಬೊಮ್ಮಣ ಗೌಡ ಕರಿಮಜಲುರವರ ನಿವಾಸದಲ್ಲಿ ವಿತರಿಸಿದರು.

 

ಮೃತಪಟ್ಟ ಇಬ್ಬರು‌ ಮಕ್ಕಳಿಗಾಗಿ ಸರಕಾರದಿಂದ ತಲಾ 5 ಲಕ್ಷದಂತೆ ಹಾಗೂ‌ ಮನೆ ನಾಶಕ್ಕಾಗಿ ಸರಕಾರ ನೀಡುವ ರೂ. 95ಸಾವಿರದ 100 ಹಾಗೂ ಮನೆಯೊಳಗಿದ್ದ ವಸ್ತುಗಳು ನಾಶವಾಗಿರುವುದಕ್ಕೆ ಸರಕಾರದಿಂದ ಕೊಡ ಮಾಡುವ ರೂ. 10 ಸಾವಿರ ಹೀಗೆ ಒಟ್ಟು 11 ಲಕ್ಷ 5 ಸಾವಿರದ 100 ರೂ ವಿತರಿಸಲಾಯಿತು.

 

ಈ ಸಂದರ್ಭದಲ್ಲಿ ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ವೆಂಕಟ್ ವಳಲಂಬೆ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮುಳಿಯ ಕೇಶವ ಭಟ್, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕಡಬ ತಹಶಿಲ್ದಾರ್ ಅನಂತ ಶಂಕರ, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ,
ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯೆ ಭಾರತಿ ದಿನೇಶ್, ಸುಬ್ರಹ್ಮಣ್ಯ ಐನೆಕಿದು ಸಹಕಾರಿ ಸಂಘದ ನಿರ್ದೇಶಕ ವೆಂಕಟೇಶ್ ಹೆಚ್.ಎಲ್., ಸುಬ್ರಹ್ಮಣ್ಯದ ಉದ್ಯಮಿ ರವಿ ಕಕ್ಕೆಪದವು,
ಮತ್ತಿತರರು ಉಪಸ್ಥಿತರಿದ್ದರು.