ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ

0

 

ಅಧ್ಯಕ್ಷರಾಗಿ ದಯಾನಂದ ಕೊರತ್ತೋಡಿ ಅವಿರೋಧ ಆಯ್ಕೆ

 

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ದಯಾನಂದ ಕೊರತ್ತೋಡಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.

ಆ.3ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆಯಲ್ಲಿ 2022-23ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಸಂಘದ ಅಧ್ಯಕ್ಷ ಪದ್ಮನಾಭ ಮುಂಡೋಕಜೆಯವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಪ್ರಧಾನ ಕಾರ್ಯದರ್ಶಿ ಗಣೇಶ್ ಮಾವಂಜಿ ವರದಿ ವಾಚಿಸಿದರು. ಕೋಶಾಧಿಕಾರಿ ದಯಾನಂದ ಕೊರತ್ತೋಡಿ ಲೆಕ್ಕಪತ್ರ ಮಂಡಿಸಿದರು. ಗೌರವಾಧ್ಯಕ್ಷ ಕೃಷ್ಣ ಬೆಟ್ಟ ಉಪಸ್ಥಿತರಿದ್ದರು.

*ನೂತನ ಸಮಿತಿ* : ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ದಯಾನಂದ ಕೊರತ್ತೋಡಿ, ಗೌರವಾಧ್ಯಕ್ಷರಾಗಿ ಪದ್ಮನಾಭ ಮುಂಡೋಕಜೆ, ಪ್ರಧಾನ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಕೇರ್ಪಳ, ಕೋಶಾಧಿಕಾರಿಯಾಗಿ ದಯಾನಂದ ಕಲ್ನಾರು, ಉಪಾಧ್ಯಕ್ಷರಾಗಿ ಸತೀಶ್ ಹೊದ್ದೆಟ್ಟಿ, ಜತೆ ಕಾರ್ಯದರ್ಶಿ ಯಾಗಿ ಪ್ರಜ್ಞಾ ಎಸ್. ಸತ್ಯನಾರಾಯಣ, ನಿರ್ದೇಶಕರುಗಳಾಗಿ ಹಸೈನಾರ್ ಜಯನಗರ, ತೇಜೇಶ್ವರ ಕುಂದಲ್ಪಾಡಿ,ಸುದೀಪ್ ಕೋಟೆಮೂಲೆ, ಪದ್ಮನಾಭ ಅರಂಬೂರು, ಮುರಳೀಧರ ಅಡ್ಡನಪಾರೆ, ಗಣೇಶ್ ಮಾವಂಜಿ, ಗೌರವ ಸಲಹೆಗಾರರಾಗಿ ಗಂಗಾಧರ ಮಟ್ಟಿ, ಕೃಷ್ಣ ಬೆಟ್ಟ, ದುರ್ಗಾಕುಮಾರ್ ನಾಯರ್ ಕೆರೆ, ಲೋಕೇಶ್ ಪೆರ್ಲಂಪಾಡಿ, ಗಂಗಾಧರ್ ಕಲ್ಲಪಳ್ಳಿ, ಗಿರೀಶ್ ಅಡ್ಪಂಗಾಯ, ಜಯಪ್ರಕಾಶ್ ಕುಕ್ಕೆಟ್ಟಿ ಆಯ್ಕೆಯಾದರು.