ದೇವಚಳ್ಳ : ವಿವಾಹಿತ ಮಹಿಳೆಯ ಅತ್ಯಾಚಾರ, ಹಣ ಪಡೆದು ವಂಚನೆ – ಪೋಲೀಸ್ ದೂರು

0
3826

 

p>

ವಿವಾಹಿತ ಮಹಿಳೆಯನ್ನು ಪಾನಮತ್ತ ಯುವಕನೊಬ್ಬ ರಾತ್ರಿ ವೇಳೆ ಅತ್ಯಾಚಾರವೆಸಗಿ ವಂಚನೆ ನಡೆಸಿರುವುದಾಗಿ ಮಹಿಳೆ ಸುಬ್ರಹ್ಮಣ್ಯ ಪೋಲೀಸರಿಗೆ ದೂರು ನೀಡಿರುವ ಘಟನೆ ವರದಿಯಾಗಿದೆ.

ದೇವಚಳ್ಳ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ತನ್ನ ಮಕ್ಕಳೊಂದಿಗೆ ವಾಸವಿರುವ ಮಹಿಳೆಯೊಬ್ಬರ‌ ಮನೆಗೆ ಇದೇ ಗ್ರಾಮದ ಪವನ್(39 ವರ್ಷ) ಎಂಬ ಯುವಕ ದಿನಾಂಕ 20-5-2022ರಂದು ರಾತ್ರಿ 10 ಗಂಟೆಯ ವೇಳೆಗೆ ಬಾಡಿಗೆ ಮನೆಗೆ ಮದ್ಯಪಾನ ಮಾಡಿಕೊಂಡು ಬಂದು ಬೊಬ್ಬೆ ಹೊಡೆಯದೆ ಹಾಗೆ ಬಾಯಿಯನ್ನು ಮುಚ್ಚಿ ಬಲವಂತವಾಗಿ ಅತ್ಯಾಚಾರ ನಡೆಸಿದ್ದು, ಈ ವಿಷಯವನ್ನು ಪೋಲೀಸ್ ಠಾಣೆಗೆ ತಿಳಿಸುತ್ತೇನೆ ಎಂದಾಗ ಆತ ನಿನ್ನನ್ನು ಮದುವೆಯಾಗುತ್ತೇನೆ ಪೋಲೀಸರಿಗೆ ಹೇಳುವುದು ಬೇಡ ಎಂದಿದ್ದಾನೆ. ಮದುವೆಯಾಗುವ ಬಗ್ಗೆ ಲಾಯರ್ ಮುಖಾಂತರ ವೀಲ್‌ನಲ್ಲಿ ಒಪ್ಪಿಗೆ ನೀಡಿದ್ದು, ಇದೀಗ ನನ್ನಿಂದ 1,70,000 ರೂ.ವನ್ನು ಪಡೆದುಕೊಂಡಿದ್ದು, ಮದುವೆಯಾಗುವುದಿಲ್ಲ ಎಂದು ಹೇಳಿ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಸುಬ್ರಹ್ಮಣ್ಯ ಪೋಲೀಸರು ದೂರು ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here