ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನಲ್ಲಿ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

0

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನಲ್ಲಿ ಆ.15 ರಂದು 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸಲಾಯಿತು.
ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಕೊಪ್ಪಡ್ಕ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಶ್ರೀ ಚಾಂತಾಳ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋಹನ್.ಕೆ ಕಡ್ತಲ್ ಕಜೆ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶುಭಲತಾ ಕಟ್ಟ, ಶಿವಮ್ಮ ಕಟ್ಟ, ಪುಷ್ಪರಾಜ್ ಪಡ್ಪು, ಮೋಹಿನಿ ಕಟ್ಟ ಹಾಗೂ ಅಂಗನವಾಡಿ ಕಾರ್ಯಕರ್ತೆಯರಾದ ನಳಿನಿ ಕೊಲ್ಲಮೊಗ್ರು, ನೇತ್ರಾವತಿ, ವಕೀಲರಾದ ಪ್ರದೀಪ್ ಕುಮಾರ್ ಕೆ.ಎಲ್, ಬಂಗ್ಲೆಗುಡ್ಡೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಭಟ್, ಮುಖ್ಯೋಪಾಧ್ಯಾಯರಾದ ಕಮಲ, ಸಹ ಶಿಕ್ಷಕರಾದ ಸುಭಾಷ್, ರೇಷ್ಮಾ, ಶಾಲಾ ವಿದ್ಯಾರ್ಥಿಗಳು, ಕಿಶೋರ್ ಕೊಂದಾಳ, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಸಂತೋಷ್ ನಾಯ್ಕ ಗಡಿಕಲ್ಲು, ನವ್ಯ ನಡುಗಲ್ಲು, ವಸಂತ ಕೊರಂಬಟ, ಲೀಲಾವತಿ ಶಿರೂರು, ಮಮತಾ ಮರಕತ, ಆಶಿಶ್ ಕಟ್ಟೆಮನೆ ಹಾಗೂ ಕೊಲ್ಲಮೊಗ್ರು ಕೀರ್ತಿ ಸಂಜೀವಿನಿ ಸ್ವಸಹಾಯ ಸಂಘದ ಪದಾಧಿಕಾರಿಗಳಾದ ಲೀಲಾವತಿ ತಂಬಿನಡ್ಕ, ವಿಮಲಾಕ್ಷಿ ಗೋಲ್ಯಾಡಿ, ಸುನಂದಾ ಗಡಿಕಲ್ಲು, ವಸಂತಿ ತಂಬಿನಡ್ಕ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಮೋಹನ್ ಕಡ್ತಲ್ ಕಜೆ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here