ಅರೆಭಾಷೆ‌ ಅಕಾಡೆಮಿ ಅಧ್ಯಕ್ಷರು, ಸದಸ್ಯರಿಂದ ‌ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಭೇಟಿ – ಮಾತುಕತೆ

0

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರು ಹಾಗೂ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ. ಜಯರಾಮ ಅವರನ್ನು ಅರೆಭಾಷೆ ಅಕಾಡೆಮಿಯ ನೂತನ ಅಧ್ಯಕ್ಷರು ಹಾಗೂ ಸದಸ್ಯರ ತಂಡ ಇಂದು ಅವರ ಸ್ವಗೃಹದಲ್ಲಿ ಭೇಟಿ ನೀಡಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಪಿ.ಸಿ. ಜಯರಾಮ ಇವರು ಹೊಸತಂಡಕ್ಕೆ ಶುಭ ಹಾರೈಸುತ್ತಾ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯಕ್ಕಾಗಿ ಉತ್ತಮ ಕೆಲಸ ಕಾರ್ಯಗಳು ಮೂಡಿ ಬರಲಿ ಎಂದು ಶುಭ ನುಡಿದರು.
ತಂಡದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾದ ಸದಾನಂದ ಮಾವಜಿ ಹಾಗೂ ಸದಸ್ಯರುಗಳಾದ ಚಂದ್ರಶೇಖರ್ ಪೇರಾಲು, ತೇಜಕುಮಾರ್ ಕುಡೇಕಲ್ಲು, ಶ್ರೀಮತಿ ಚಂದ್ರಾವತಿ ಬಡ್ಡಡ್ಕ, ಶ್ರೀಮತಿ ಲತಾ ಕುದ್ಪಾಜೆ, ಡಾ| ಎನ್.ಎ ಜ್ಞಾನೇಶ್ ಉಪಸ್ಥಿತರಿದ್ದರು.
ಪಿ.ಸಿ. ಜಯರಾಮ್ ಹಾಗೂ ಅವರ ಪತ್ನಿ‌ ಮಡಪ್ಪಾಡಿ‌ ಗ್ರಾಮಪಂಚಾಯತ್‌ ಅಧ್ಯಕ್ಷೆ‌ ಶ್ರೀಮತಿ‌ ಉಷಾಜಯರಾಮ್, ಪುತ್ರಿ‌ ಸ್ಪಂದನಾ‌ ಇವರನ್ನೊಳಗೊಂಡ‌ ಕುಟುಂಬವು ನೂತನ ಸದಸ್ಯರನ್ನು ಆದರದಿಂದ ಬರಮಾಡಿಕೊಂಡು, ಶುಭ ಹಾರೈಸಿ, ಉಪಚರಿಸಿ ಬೀಳ್ಕೊಟ್ಟಿದ್ದು, ಇದೊಂದು ಸೌಹಾರ್ದ ಭೇಟಿಯಾಗಿತ್ತು.