ಪೆರಾಜೆ: 75 ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ

0

ಅದ್ದೂರಿಯಿಂದ ನಡೆದ ಕಾಲ್ನಡಿಗೆ ಹಾಗೂ ವಾಹನ ಜಾಥಾ

ಪೆರಾಜೆ ಗ್ರಾಮ ಪಂಚಾಯಿತಿ, ಪೆರಾಜೆ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಜ್ಯೋತಿ ಪ್ರೌಢಶಾಲೆ ಇದರ ಸಂಯುಕ್ತ ಆಶಯದಲ್ಲಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ಇಂದು ಜ್ಯೋತಿ ಪ್ರೌಢಶಾಲೆ ಪೆರಾಜೆಯಲ್ಲಿ ನಡೆಯಿತು. ಬೆಳಗ್ಗೆ  ಪಂಚಾಯತ್‌ನಲ್ಲಿ ಧ್ವಜಾರೋಹಣದ ಬಳಿಕ  ಪೆರಾಜೆ ಗ್ರಾಮ ಪಂಚಾಯಿತಿಯಿಂದ ಕಾಲ್ನಡಿಗೆ ಮತ್ತು ದ್ವಿಚಕ್ರ ವಾಹನ ಜಾಥಾ ಆರಂಭವಾಗಿ ಜ್ಯೋತಿ ಪ್ರೌಢಶಾಲೆಯವರೆಗೆ ನಡೆಯಿತು. ಈ ಸಂದರ್ಭದಲ್ಲಿ ಪಂಚಾಯತಿನವರು, ಗ್ರಾಮಸ್ಥರು, ಶಾಲಾ ಮಕ್ಕಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಭಾಗವಹಿದ್ದರು.

 

ನಂತರ ಜ್ಯೋತಿ ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಚಂದ್ರಕಲಾ ವಹಿಸಿದ್ದರು. ಜ್ಯೋತಿ ವಿದ್ಯಾಸಂಘದ ಅಧ್ಯಕ್ಷ ಜ್ಞಾನೇಶ್ ನಿಡ್ಯಮಲೆ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.


ಮುಖ್ಯ ಭಾಷಣಕಾರರಾಗಿ ಕರ್ಲಪ್ಪಾಡಿ ಶ್ರೀ ಶಾಸ್ತಾವೆಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಜೇಶ್ ಮೇನಾಲ ಹಾಗೂ ಮುಖ್ಯ ಅತಿಥಿಗಳಾಗಿ ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ರೇಖಾ, ಜ್ಯೋತಿ ಪ್ರೌಢಶಾಲಾ ಮುಖ್ಯಶಿಕ್ಷಕ ನರೇಂದ್ರ ಮುಂಡೋಡಿ, ಕುಂಬಳಚೇರಿ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಅಶೋಕ್ ಪೆರುಮುಂಡ, ಜ್ಯೋತಿ ಶಾಲಾ ಸಂಚಾಲಕ ಹರೀಶ್ ಮುಡ್ಕಜೆ, ಪಿಡಿಒ ಮಹಾದೇವಪ್ರಭು ಕೆ.ವಿ. ಹಾಗೂ ಗಣ್ಯರು ಉಪಸ್ಥಿತರಿದ್ದರು.