ಶಿವಕುಮಾರ್ ಪೈಲೂರು ನಿಧನ

0

 

 

ಅಮರಮುಡ್ನೂರು ಗ್ರಾಮದ ಪೈಲೂರು ನಿವಾಸಿ ಶಿವಕುಮಾರ್ ರವರು ಅಲ್ಪ ಕಾಲದ ಅಸೌಖ್ಯದಿಂದ ಆ.28 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು.
ಮೃತರು ತಾಯಿ, ಪತ್ನಿ, ಮಕ್ಕಳನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷರಾಗಿದ್ದರು.ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಕುಕ್ಕುಜೆ ಪೈಲೂರು ಕುಟುಂಬದ ತರವಾಡು ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸ್ನೇಹ ಜೀವಿಯಾಗಿದ್ದು ಪರೋಪಕಾರಿಯಾಗಿ ಜನಾನುರಾಗಿಯಾಗಿದ್ದರು.